ಅಂಕೋಲಾ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ

26-ankola annaprasad
Published on

ಅಂಕೋಲಾ: ತಾಲೂಕಿನ ದೊಡ್ಡ ದೇವರು ಎಂದೇ ಖ್ಯಾತಿ ಪಡೆದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ 2ನೇ ಶನಿವಾರ ಪ್ರಯುಕ್ತ ಪಟ್ಟಣದ ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಂಜುನಾಥ ನಾಯಕ ಮತ್ತು ಉಪಾಧ್ಯಕ್ಷ ಗೋಪು ನಾಯಕ ಅಡ್ಲೂರು ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.
ದಿ. ಆರ್.ಎನ್. ನಾಯಕ ಕುಟುಂಬದ ದೇವಸ್ಥಾನ ಆಡಳಿತ ಮಂಡಳಿಯ ಮೊಕ್ತೆಸರ ಮಯೂರ ಆರ್. ನಾಯಕ, ಪ್ರಮುಖರಾದ ಡಿ.ಎನ್. ನಾಯಕ, ಆರ್.ಟಿ. ಮಿರಾಶಿ, ಗೋಪಾಲಕೃಷ್ಣ ನಾಯಕ, ರಂಜನ ಹಿಚ್ಕಡ, ಜಗದೀಶ ನಾಯಕ ಮೊಗಟಾ, ಬಿಂದೇಶ ನಾಯಕ ಹಿಚ್ಕಡ, ಭಾಸ್ಕರ ಕೆ. ನಾರ್ವೇಕರ್, ಚೇತನ ಎನ್. ನಾಯಕ, ಗಣಪತಿ ನಾಯಕ ಮೂಲೆಮನೆ, ಉಮೇಶ ಎನ್. ನಾಯ್ಕ, ನಾಗಾನಂದ ಬಂಟ, ವಿಜಯಕುಮಾರ ವೈ. ನಾಯ್ಕ, ವಿನಾಯಕ ನಾಯಕ, ಅರುಣ ಹರ್ಕಡೆ, ವಿಕಾಸ ನಾಯಕ ವಂದಿಗೆ, ದಿನೇಶ ನಾಯಕ ವಾಸರೆ, ರಮೇಶ ಮಾಸ್ತರ, ರಾಜೇಶ ನಾಯಕ ಸೇರಿ ಸಾವಿರಾರು ಭಕ್ತರು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು. ಅನ್ನ ಸಂತರ್ಪಣೆ ಪೂರ್ವದಲ್ಲಿ ದೇವಸ್ಥಾನದ ಅರ್ಚಕ ಸೂರ್ಯಪ್ರಕಾಶ ಭಟ್ ಪೂಜೆ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net