

ಅಂಕೋಲಾ: ಪಟ್ಟಣದ ನಾಡವರ ಸಭಾಭವನದಲ್ಲಿ ಫೆ. 25ರಂದು ನಡೆಯಲಿರುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ಭಟ್ ಅವರು ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಅಂಕೋಲಾ ಸಾಹಿತ್ಯದ ತವರೂರು. ಈ ಲಾಂಛನವು ಅಂಕೋಲಾದ ಸಮಗ್ರತೆಯನ್ನು ಬಿಂಬಿಸುವ ಹಾಗೂ ಗೌರವ ತಂದುಕೊಟ್ಟ ಸಂಗತಿಗಳ ಸಮ್ಮಿಶ್ರಣವಾಗಿದ್ದು, ಅತ್ಯಂತ ಸುಂದರವಾಗಿ ರಚಿತವಾಗಿದೆ. ಆದ್ದರಿಂದ ಸಮ್ಮೇಳನ ಸಹ ಸಮಗ್ರತೆಯಿಂದ ಕೂಡಿರಲಿದ್ದು ಅದನ್ನು ನಾವೆಲ್ಲರೂ ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದರು.
ಡಾ. ವಿನಾಯಕ ಹೆಗಡೆ, ಮಂಜುನಾಥ ಇಟಗಿ, ಮಹಾಂತೇಶ ರೇವಡಿ, ಅರುಣ ಶೆಟ್ಟಿ, ಸುಜೀತ ನಾಯ್ಕ, ಪುಷ್ಪಾ ನಾಯ್ಕ, ಡಾ.ಎಸ್.ವಿ. ವಸ್ತ್ರದ, ರಫೀಕ್ ಶೇಖ್, ಎನ್.ವಿ. ರಾಥೋಡ, ಎಂ.ಬಿ. ಆಗೇರ, ತಿಮ್ಮಣ್ಣ ಭಟ್, ಇತರರು ಉಪಸ್ಥಿತರಿದ್ದರು.
ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ, ಕಸಾಪ ತಾಲೂಕು ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಕಾರ್ಯಕ್ರಮ ನಿರ್ವಹಿಸಿದರು.