

ಅಂಕೋಲಾ: ತಾಲೂಕಿನ ಮಂಜಗುಣಿಯ ಶ್ರೀ ತಾರಿಜಟಕ ದೇವರ ಅವಾರಿಯು ಜುಲೈ 9 ರಂದು ನಡೆಯಲಿದೆ. ಪ್ರತಿವರ್ಷ ಜೂನ್ ಅಥವಾ ಜುಲೈನಲ್ಲಿ ನಡೆಯುವ ಈ ಹಬ್ಬಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
ಈ ದೇವರು ಗಂಗಾವಳಿ ನದಿಯಂಚಿಗೆ ಇರುವುದರಿಂದ ಮಂಜಗುಣಿ, ಗಂಗಾವಳಿ, ಹನೇಹಳ್ಳಿ, ಬಂಕಿ ಕೊಡ್ಲ ಇನ್ನು ಅಂಕೋಲಾದ ವಿವಿಧ ಗ್ರಾಮದವರು ಕೂಡ ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಹಾಗೇಯೇ ಹರಕೆ ರೂಪದಲ್ಲಿ ಕುರಿ-ಕೋಳಿಗಳನ್ನು ನೀಡುವ ವಾಡಿಕೆ ಹಿಂದಿನಿಂದಲೂ ನಡೆದು ಬಂದಿದೆ. ಭಕ್ತರು ತಮ್ಮ ಹರಕೆ ಸಲ್ಲಿಸುವಂತೆ ಶ್ರೀ ವಿನಾಯಕದೇವ, ತಾರಿಜಟಕದೇವ, ಪಬ್ಲಿಕ್ ಟ್ರಸ್ಟ್ ಸಮಿತಿ ತಿಳಿಸಿದೆ.