ಕುಂಟಗಣಿ ಸಹಕಾರಿ ಸಂಘಕ್ಕೆ ಶಾಂತಾರಾಮ ಅಧ್ಯಕ್ಷ

12-ankola-kuntagani
Published on

ಅಂಕೋಲಾ: ತಾಲೂಕಿನ ಅಚವೆ ಕುಂಟಗಣಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ 2023-24ರಿಂದ ಮುಂದಿನ 5 ವರ್ಷದ ಅವಧಿಗೆ ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಶಾಂತಾರಾಮ ತಿಮ್ಮಣ್ಣ ಗಾಂವಕರ, ಉಪಾಧ್ಯಕ್ಷರಾಗಿ ಕೃಷ್ಣ ನೀಲಕಂಠ ಹೆಬ್ಬಾರ ಅವಿರೋಧ ಆಯ್ಕೆಯಾದರು. ನಿರ್ದೇಶಕರಾಗಿ ಲತೀಶ ನಾಗರಾಜ ನಾಯಕ, ನಾಗಪ್ಪ ಅಮಾಸ್ಯೆ ಗೌಡ, ರಾಮಚಂದ್ರ ದೇವಪ್ಪ ಹೆಗಡೆ, ರಾಮಚಂದ್ರ ನರಸಿಂಹ ನಾಯ್ಕ, ಮಂಜುನಾಥ ಬಾಬು ಗುನಗಾ, ವಿಷ್ಣು ತಿಮ್ಮಪ್ಪ ಹಳ್ಳೇರ, ಕೃಷ್ಣ ಸಣಿಯಾ ಸಿದ್ದಿ, ಬಾಗಿ ಬುದ್ದು ಗೌಡ, ಶ್ಯಾಮಲಾ ವಿಠ್ಠಲ ನಾಯಕ ಆಯ್ಕೆಯಾಗಿದ್ದಾರೆ. ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಕೆಡಿಸಿಸಿಬ್ಯಾಂಕ್ ನಿರ್ದೇಶಕ ಬೀರಣ್ಣ ನಾಯಕ (ಬಾಬು ಸುಂಕೇರಿ), ಅಚವೆ ಗ್ರಾಪಂ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ, ಮಾಜಿ ಸದಸ್ಯರಾದ ಉದಯ ಗುನಗಾ, ಉಮಾಮಹೇಶ್ವರ ಹೆಗಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net