ಹೊನ್ನೆಬೈಲ್‌ಗೆ ಜಯಪ್ರಕಾಶ ಹೆಗಡೆ ಭೇಟಿ

21-ankola hegde
Published on

ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಪಂ ವ್ಯಾಪ್ತಿಯ ಕುಶಲ (ಕೃಷ್ಣ) ದೇವಸ್ಥಾನಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಬುಧವಾರ ಭೇಟಿ ನೀಡಿ ಹಾಲಕ್ಕಿ ಸಮಾಜದವರೊಂದಿಗೆ ಚರ್ಚೆ ನಡೆಸಿದರು.
ಹಾಲಕ್ಕಿ ಒಕ್ಕಲಿಗರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ ಸದಸ್ಯರು ಜಿಲ್ಲಾಧ್ಯಕ್ಷ ಹನುಮಂತ ಗೌಡ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಮಾತನಾಡಿ, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವು ಈ ಕುರಿತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಬೇಕು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಈ ಕುರಿತು ಅಗತ್ಯ ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದರು.
ಆಯೋಗದ ಸದಸ್ಯರಾದ ಕಲ್ಯಾಣಕುಮಾರ, ಅರುಣಕುಮಾರ, ರಾಜಶೇಖರ, ಶಾರದಾ ನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ. ಸತೀಶ, ಭಟ್ಕಳ ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಮನೋಹರ ಆಗೇರ, ಅಂಕೋಲಾ ವಿಸ್ತರಣಾಧಿಕಾರಿ ಸೀತಾ ಗೌಡ, ಮೇಲ್ವಿಚಾರಕ ಶಿವಾನಂದ ನಾಯ್ಕ, ಹೊನ್ನೆಬೈಲ್ ಗ್ರಾಪಂ ಅಧ್ಯಕ್ಷ ಮಾದೇವ ಗುನಗಾ, ಗ್ರಾಪಂ ಮಾಜಿ ಅಧ್ಯಕ್ಷ ಮಾದೇವ ಬಿ. ಗೌಡ, ವಿಠೋಬಾ ಗುನಗಾ, ಕರಿಯಾ ಗೌಡ, ಗೋಪಾಲ ಗೌಡ, ಲಕ್ಷ್ಮೀ ಗೌಡ, ಸುಕ್ರಿ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net