ಸಮಾಜಸೇವೆ ಚಟುವಟಿಕೆಗಳಲ್ಲಿ ಅಂಕೋಲಾ ಮುಂದು

Ank lions
Published on

ಅಂಕೋಲಾ: ಸಮಾಜಸೇವೆ ಚಟುವಟಿಕೆಗಳಲ್ಲಿ ಅಂಕೋಲಾ ಮುಂಚೂಣಿಯಲ್ಲಿದೆ ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೇಳಿದರು.

ಇಲ್ಲಿನ ಶೆಟಗೇರಿಯ ವಾಸುದೇವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಬೆಳ್ಳಿಹಬ್ಬ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಕೆ.ವಿ. ಶೆಟ್ಟಿ, ಸದಸ್ಯ ಎಸ್.ಆರ್. ಉಡುಪಿ, ಆಶ್ರಯ ಫೌಂಡೇಷನ್ ಅಧ್ಯಕ್ಷ ರಾಜೀವ ಗಾಂವಕರ ಹಿರೇಗುತ್ತಿ, ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಶಿರಸಿ, ಸಹಕಾರಿ ಧುರೀಣ ರಾಘವೇಂದ್ರ ನಾಯಕ ದೇವರಬಾವಿ, ಯೋಗ ಸಾಧಕಿ ಜ್ಯೋತ್ಸ್ನಾ ನಾರ್ವೇಕರ್, ಸಮಾಜ ಸೇವಕ ಎಸ್.ಜೆ. ಕೈರನ, ಕಿಮ್ಸ್ ಕಾರವಾರದ ನಿವೃತ್ತ ನಿರ್ದೇಶಕ ಡಾ. ಗಜಾನನ ನಾಯಕ, ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ, ಸಮಾಜ ಸೇವಕರಾದ ಖಾಸಿಂ ಮುಜಾವರ್, ವಿಜಯಕುಮಾರ ವೈ. ನಾಯ್ಕ ಕನಸಿಗದ್ದೆ, ಪ್ರಭಾಕರ ನಾಯ್ಕ, ಪಾಂಡುರಂಗ ಗೌಡ, ಮಹೇಶ ನಾಯ್ಕ, ರವೀಂದ್ರ ಶೆಟ್ಟಿ, ಜಗದೀಶ ಖಾರ್ವಿ, ಶ್ಯಾಮಸುಂದರ ಗೌಡ ಅವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಜಿಲ್ಲಾ ಸಲಹೆಗಾರ ಕೆ. ದೇವೇಗೌಡ, ಲಯನ್ಸ್ ಜಿಲ್ಲಾ ಗವರ್ನರ್ ಮನೋಜ ಮಾಣಿಕ್, ಮಹಮ್ಮದ್ ಹನೀಫ್, ಮಾಣೇಶ್ವರ ನಾಯಕ, ಅಶೋಕ ಹೆಗಡೆ, ಗಣಪತಿ ನಾಯಕ, ಗಿರೀಶ್ ಕುಚಿನಾಡ, ರವೀಂದ್ರ ನಾಯಕ, ವಿನೋದ ಜೈನ್, ರಕ್ಷಾ ಮಾಣಿಕ್ ಉಪಸ್ಥಿತರಿದ್ದರು.

ಅಂಕೋಲಾ ಲಯನ್ಸ್ ಕರಾವಳಿ ಅಧ್ಯಕ್ಷ ದೇವಾನಂದ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಥ್ವಿ ಗಾಂವಕರ್ ಮತ್ತು ಪುನೀತ್ ನಾಯ್ಕ ಅವರಿಂದ ಯಕ್ಷನೃತ್ಯ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net