ಪಾದಯಾತ್ರೆ ನಮ್ಮ ಪೂರ್ವಜನ್ಮದ ಪುಣ್ಯ

30ANKALAGI1
ಅಕ್ಕತಂಗೇರಹಾಳ ಗ್ರಾಮದಿಂದ ಉಳವಿಗೆ ಭಕ್ತರು ಪಾದಯಾತ್ರೆಗೆ ತೆರಳಿದರು. ಗುರುದೇವ ಸಿದ್ದಾಪುರಮಠ, ಶ್ರೀಶೈಲ ಹಂಜಿ, ವೀರನಗೌಡ ಈಶ್ವರಪ್ಪಗೋಳ, ಸುರೇಶ ಉರಬಿನಟ್ಟಿ ಇತರರಿದ್ದರು.
Published on

ಅಂಕಲಗಿ: ಉಳವಿಗೆ ಪಾದಯಾತ್ರೆ ಮಾಡುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಗೋಕಾಕ ಲಯನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಗುರುದೇವ ಸಿದ್ದಾಪುರಮಠ ಹೇಳಿದರು.

ಸಮೀಪದ ಅಕ್ಕತಂಗೇರಹಾಳ ಗ್ರಾಮದ ದುರ್ಗಾ ದೇವಸ್ಥಾನದಿಂದ ಉಳವಿಗೆ ಶ್ರಾವಣ ಮಾಸದ ನಿಮಿತ್ತ ಗುರುವಾರ ಅಡವಿಸ್ವಾಮಿ ಶರಣರು, ಬೆಳಗಾವಿ ವನ್ಯಜೀವಿ ಪರಿಸರ ಅಭಿವೃದ್ಧಿ ವೇದಿಕೆ ಮತ್ತು ಗೋಕಾಕ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಶ್ರೀಶೈಲ ಹಂಜಿ, ಸುರೇಶ ಉರಬಿನಟ್ಟಿ ಮಾತನಾಡಿದರು. ವೀರನಗೌಡ ಈಶ್ವರಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಮಠಪತಿ ಪಾದಯಾತ್ರಿಗಳಿಗೆ ಟಿಶರ್ಟ್ ವಿತರಿಸಿದರು. ವಿ.ಬಿ. ಈಶ್ವರಪ್ಪಗೋಳ, ಅರ್ಜುನ ಕರಲಿಂಗನ್ನವರ, ಅಡಿವೆಪ್ಪ ಪಾಟೀಲ, ಸಂತೋಷ ಈಶ್ವರಪ್ಪಗೋಳ, ಅಶೋಕ ಕರಲಿಂಗನ್ನವರ, ಶಂಕರ ಬೆಣ್ಣಿ, ಶಿವಾನಂದ ಪಂಗನ್ನವರ, ಮಹಾಂತೇಶ ಈಶ್ವರಪ್ಪಗೋಳ, ಗೌಡಪ್ಪ ಹೊಳೆಯಾಚಿ, ಶ್ರೀಧರ ಈಶ್ವರಪ್ಪಗೋಳ, ಗುರು ಶರಣ, ಮಹೇಶ ನಿರ್ವಾಣಿ, ರಾಜು ತಿಳಗಂಜಿ, ಅಜೇಯ ಕಬಾಡಗಿ, ವಿನೋದ ನೇಸರಗಿ, ದುಂಡಪ್ಪ ವನ್ನೂರ ಪಾದಯಾತ್ರೆಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net