

ಉಳ್ಳಾಗಡ್ಡಿ-ಖಾನಾಪುರ: ಅಂಕಲಗುಡಿಕ್ಷೇತ್ರ ಗ್ರಾಮದ ಸಮಗ್ರ ಅಭಿವೃದ್ದಿಗೆ ಬದ್ಧ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು, ಸಮೀಪದ ಅಂಕಲಗುಡಿಕ್ಷೇತ್ರ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಜ್ವಲಂತ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು. ಶಾಲಾ ಕೊಠಡಿ ನಿರ್ಮಿಸಿಕೊಡಲಾಗುವುದು ಎಂದರು. ಪಿಕೆಪಿಎಸ್ ಅಧ್ಯಕ್ಷ ಶಿವಾನಂದ ಹೆಬ್ಬಾಳ ಹಾಗೂ ಮಾವನೂರ ಗ್ರಾಪಂ ಅಧ್ಯಕ್ಷ ಶಿವಲಿಂಗ ಹೆಬ್ಬಾಳ ಅವರು ಶಾಸಕರನ್ನು ಸನ್ಮಾನಿಸಿದರು. ಮುಖಂಡ ಬಸವರಾಜ ಮಟಗಾರ, ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ರಾಚಯ್ಯ ಹಿರೇಮಠ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ದುರದುಂಡಿ ಪಾಟೀಲ, ಮರಡೆಪ್ಪ ಹೆಬ್ಬಾಳ, ಭೀಮಗೌಡ ಭೂಸಿ, ಸಿದ್ದಲಿಂಗ ಹಂಚಿನಾಳ, ಮಲ್ಲಪ್ಪ ಹಂಚಿನಾಳ, ಲಗಮನಗೌಡ ಪಾಟೀಲ, ಬಸವರಾಜ ತೋಶಿ, ವೀರಭದ್ರ ಮಣಗುತ್ತಿ, ಸಿಇಒ ಚಂದ್ರಪ್ಪ ಗಿಡ್ಡನವರ ಇತರರಿದ್ದರು.