ಆಂಜನೇಯಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮಾ. 7ರಿಂದ

LXR ANJANEYA TEMPLE
Published on

ಲಕ್ಷೆ್ಮೕಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ನೂತನವಾಗಿ ನಿರ್ವಣಗೊಂಡ ಉತ್ತರಾಭಿಮುಖಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ಮಾ. 7ರಿಂದ 9ರವರೆಗೆ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಹಾಗೂ ಧರ್ಮಸಭೆ ಕಾರ್ಯಕ್ರಮಗಳು ನೆರವೇರಲಿವೆ ಎಂದು ದೇವಸ್ಥಾನ ಜೀಣೋದ್ಧಾರ ಕಮಿಟಿ ಅಧ್ಯಕ್ಷ ಗೋಪಾಲರಾವ್ ಕುಬೇರ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಲಕ್ಷೆ್ಮೕಶ್ವರ ಭಾಗದ ಹಾಲುಮತ ಸಮಾಜದವರು 45 ಕೆಜಿ ತೂಕದ ಕಂಚಿನ ಕಳಸ, ಹಳೆಯ ವಿದ್ಯಾರ್ಥಿಗಳು 1 ಕೆಜಿ ಬೆಳ್ಳಿ ಪ್ರಭಾವಳಿ ಕಾಣಿಕೆ ಸಲ್ಲಿಸಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿ 11 ಲಕ್ಷ ರೂ. ಸಂಗ್ರಹವಾಗಿತ್ತು. ಗ್ರಾಮದ ಭಕ್ತರೆಲ್ಲ ಸೇರಿ 35 ಲಕ್ಷ ರೂ. ಸಂಗ್ರಹಿಸಿದ್ದಾರೆ. ಧರ್ಮಸ್ಥಳ ಸಂಘದಿಂದ 2 ಲಕ್ಷ ರೂ. ಸರ್ಕಾರದ ಅನುದಾನ ಹಾಗೂ ದಾನಿಗಳ ಸಹಾಯ ಸೇರಿ ಒಟ್ಟು 90 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ಲೋಕಾರ್ಪಣೆಗೊಳ್ಳುತ್ತಿದೆ ಎಂದು ತಿಳಿಸಿದರು.

ಗ್ರಾಮದ ಹಿರಿಯರಾದ ರಾಮಣ್ಣ ಹಾವನೂರ, ಎಸ್.ಜಿ. ಮಾದಾಪುರ ಮಾತನಾಡಿ, ಕ್ರಿ.ಶ 5ನೇ ಶತಮಾನದ ದೇವಸ್ಥಾನ ಇದಾಗಿದ್ದು, ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಚನ್ನಮ್ಮ ಮೈಲಾರಿ, ಶಿವಣ್ಣ ಕಬ್ಬೇರ, ಸೋಮಯ್ಯ ಚನ್ನಾಪುರಮಠ, ಬಸವರೆಡ್ಡಿ ಹನಮರೆಡ್ಡಿ, ಯಲ್ಲಪ್ಪ ಸೂರಣಗಿ, ನಿಂಗಪ್ಪ ಮಡಿವಾಳರ, ಬಸವರಾಜ ನೀಲಣ್ಣವರ, ಅಶೋಕ ಮಾಗಿ, ಸಿದ್ಧಲಿಂಗಸ್ವಾಮಿ ಪಶುಪತಿಮಠ, ಸುರೇಶ ಹಾವನೂರ, ರಾಜು ಬೆಂಚಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net