ಹಂಚಿನಾಳದಲ್ಲಿ ಆಂಜನೇಯ ದೇವಸ್ಥಾನ ಉದ್ಘಾಟನೆ ಜು.27ರಂದು

Hanchinal Temple
ಹಂಚಿನಾಳ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ.
Published on

ದೇವದುರ್ಗ: ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಜು.27ರಂದು ಶ್ರೀ ಆಂಜನೇಯ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ.

ಹೀಗಾಗಿ ಜು.26ರಂದು ಧಾನ್ಯದಿವಾಸ, ಪೂಜಾಕಾರ್ಯ, ಗಣಪತಿ, ಗಂಗಾ ಪೂಜೆ, ಉಮಾಮಹೇಶ್ವರ ಸಮಾರಾಧನೆ, ಸಂಜೆ 5ಕ್ಕೆ ದೇವರ ಹೋಮ-ಹವನ, ಮಹಾಮಂಗಳಾರತಿ ಜರುಗಲಿದೆ. ಜು.27ರಂದು ಬೆಳಗ್ಗೆ ತ್ರಿಮೂರ್ತಿ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಜರುಗಲಿದೆ. ನಂತರ ಡಾ.ಪಂಚಾಕ್ಷರಿ ಶಿವಾಚಾರ್ಯರು ದೇವಸ್ಥಾನ ಉದ್ಘಾಟನೆ, ಕಲಶಾರೋಹಣ ನೆರವೇರಿಸುವರು. ಗಣೇಶ, ಆಂಜನೇಯ, ಶಿವಲಿಂಗ, ನಂದಿ ವಿಗ್ರಹ, ನಾಗರ ದೇವತೆ ಹಾಗೂ ಗರುಡಸ್ತಂಭ ಉದ್ಘಾಟನೆಯೂ ಜರುಗಲಿದೆ.

ಗಬ್ಬೂರು ಬೂದಿಬಸವೇಶ್ವರ ಶಿವಾಚಾರ್ಯರು, ಸುಲ್ತಾನಪುರ ಶಂಭುಸೋಮನಾಥ ಶಿವಾಚಾರ್ಯರು, ಸಾಲಿಮಠದ ಬಸವಣ್ಣಪ್ಪ ತಾತ, ಸಂಗಯ್ಯಸ್ವಾಮಿ ಹಿರೇಮಠ, ಜೇಗರಕಲ್ ನಾಗಯ್ಯಸ್ವಾಮಿ ಹಿರೇಮಠ, ಶಂಕ್ರಪ್ಪ ಪೂಜಾರಿ, ಹನುಮಪ್ಪ ಪೂಜಾರಿ ಸಾನ್ನಿಧ್ಯವಹಿಸುವರು.

ಮಾಜಿ ಸಚಿವ ಕೆ.ಶಿವನಗೌಡ, ಶಾಸಕಿ ಕರೆಮ್ಮ ಜಿ.ನಾಯಕ, ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಅತಿಥಿಗಳಾಗಿ ಭಾಗವಹಿಸಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ದೇವಸ್ಥಾನ ಸಮಿತಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net