

ಆಲ್ದೂರು: ಪಟ್ಟಣದ ಸಂತೆ ಮೈದಾನದಲ್ಲಿರುವ ಶ್ರೀಶನೇಶ್ವರ ಸ್ವಾಮಿ ಹಾಗೂ ಬಯಲು ಅಭಯಹಸ್ತ ಆಂಜನೇಯ ಸ್ವಾಮಿ ದೇವಾಲಯದ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಬುಧವಾರ ಪೂಜಾ ಕಾರ್ಯಗಳು ನಡೆದವು.
ಬುಧವಾರ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹವಾಚನ, ಗಣಪತಿ ಹೋಮ, ದುರ್ಗಾ, ನವಗ್ರಹ, ನವನಾಗ, ಶ್ರೀಶನೇಶ್ವರ ಮೂಲಮಂತ್ರ ಹೋಮ ಜರುಗಿದವು. ಮಧ್ಯಾಹ್ನ 12ಗಂಟೆಗೆ ಪೂರ್ಣಾಹುತಿ ನಂತರ ಶನೇಶ್ವರ ಸ್ವಾಮಿಗೆ ಮಹಾ ಮಂಗಳಾರತಿ ನಂತರ ತೀರ್ಥ, ಪ್ರಸಾದ ವಿನಿಯೋಗ ನಡೆಯಿತು.ರಾತ್ರಿ7 ಗಂಟೆಯಿಂದ ಶನೇಶ್ವರಸ್ವಾಮಿಯ ಉತ್ಸವ ಮೂರ್ತಿ ಪೇಟೆ ಸವಾರಿ ಉತ್ಸವ, ಕೆಂಡ ಸೇವೆ ನಡೆಯಿತು.
ವಾರ್ಷಿಕೋತ್ಸವ ಪ್ರಯುಕ್ತ ಶನೇಶ್ವರ ಸ್ವಾಮಿ ಹಾಗೂ ಬಯಲು ಆಭಯಹಸ್ತ ಆಂಜನೇಯ ಸ್ವಾಮಿಗೆ ವಿಳೇದೆಲೆ. ತೆಂಗಿನ ಸಿಂಗಾರ, ಬಾಳೆಹಣ್ಣಿನ ಜತೆಗೆ ವಿಶೇಷ ಹೂವಿನ ಆಲಂಕಾರ ಮಾಡಲಾಗಿತ್ತು. ಸಂತೆ ಮೈದಾನದ ರಸ್ತೆಯನ್ನು ತಳಿರು ತೋರಣಗಳಿಂದ, ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು.