

ಸಿಂಧನೂರು: ತಾಲೂಕಿನ ಅಲಬನೂರಿನಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ಕುಂಭೋತ್ಸವ ಈಚೇಗೆ ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ: ರಂಗ ಶ್ರಾವಣ ನಾಟಕೋತ್ಸವ 2ರಿಂದ
ಬೆಳಗ್ಗೆಯಿಂದ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ನಂತರ ಕುಂಭಗಳು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ದಢಸೂಗೂರು ಗ್ರಾಮಕ್ಕೆ ತೆರಳಿ ಅಲ್ಲಿಯ ತುಂಗಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿ,
ಪವಿತ್ರ ಗಂಗ ಜಲದಿಂದ ಸಂಜೆ 6.50ರ ಸುಮಾರಿಗೆ ಪುನಃ ಗ್ರಾಮಕ್ಕೆ ಆಗಮಿಸಿತು. ಮಳೆ, ಬೆಳೆ, ಗ್ರಾಮದ ಶಾಂತಿ ವ್ಯವಸ್ಥೆ ಕುರಿತು ಬಸವೇಶ್ವರರ ಕುಂಭಹೊತ್ತಿದ್ದ ಪೂಜಾರಿ ಹೇಳಿಕೆ ನೀಡಿದರು. ಈ ಪರಂಪರೆ ಸಾವಿರಾರು ವರ್ಷಗಳಿಂದ ನಡೆದು ಬಂದಿರುವದು ಈ ಗ್ರಾಮದ ವಿಶೇಷವಾಗಿದೆ. ರಾತ್ರಿ ಆಕರ್ಷಕವಾಗಿ ನಂದಿಕೋಲು ಕುಣಿತ ನಡೆಯಿತು.