ಪ್ರಧಾನಿ ನರೇಂದ್ರ ಮೋದಿ ಗೆಲುವು ನಿಶ್ಚಿತ

PADAYATRE
ಅಳವಂಡಿಯಲ್ಲಿ ಭಜರಂಗದಳ ಕಾರ್ಯಕರ್ತರು ಅಂಜನಾದ್ರಿಗೆ ಪಾದಯಾತ್ರೆ ಕೈಕೊಂಡರು. ಪ್ರಮುಖರಾದ ಮಹಾಂತೇಶ, ಸಂತೋಷ, ದೇವಪ್ಪ, ಸುರೇಶ, ಪ್ರತಾಪ, ಮಂಜು ಇತರರಿದ್ದರು.
Published on

ಅಳವಂಡಿ: ರಾಮರಾಜ್ಯದ ಕನಸು ನನಸಾಗಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು ಎಂದು ಅಂಜನಾದ್ರಿ ಪಾದಯಾತ್ರಿ ದೇವಪ್ಪ ಇಟಗಿ ತಿಳಿಸಿದರು.

ಗ್ರಾಮದ ಮೂಲಕ ಅಂಜನಾದ್ರಿಗೆ ಪಾದಯಾತ್ರೆ ತೆರಳುತ್ತಿರುವ ಮುಂಡರಗಿ ಭಜರಂಗದಳ ಕಾರ್ಯಕರ್ತರನ್ನು ಸ್ವಾಗತಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರಗಳು ಭಾರತವನ್ನು ವಿಶ್ವ ಗುರುವನ್ನಾಗಿಸಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದು ಅಂಜನಾದ್ರಿಯವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದರು.

ಪ್ರಮುಖರಾದ ಶೇಖರಗೌಡ, ಮುದಕನಗೌಡ, ಸಿದ್ದಪ್ಪ, ಹುಚ್ಚಿರಪ್ಪ, ದೇವಪ್ಪ ಕಟ್ಟಿಮನಿ, ಹನುಮಂತಪ್ಪ ಉಂಕಿ, ನೀಲಪ್ಪ ಹಕ್ಕಂಡಿ, ಮಹಾಂತೇಶ ಸುಣಗಾರ, ಸುರೇಶ ಭಾವಿಹಳ್ಳಿ, ಪ್ರತಾಪ ಭಾವಿಹಳ್ಳಿ, ಮಂಜುನಾಥ ಮಾಲಿಪಾಟೀಲ್, ಸಂತೋಷ ಹೂಗಾರ, ಮಲ್ಲಯ್ಯ ಮೇಗಳಮಠ ಹಾಗೂ ಭಜರಂಗದಳದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net