

ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಹುಂಡಿಯಲ್ಲಿ 25.27ಲಕ್ಷ ರೂ.ಸಂಗ್ರಹವಾಗಿದೆ.
ಭದ್ರತೆ ದೃಷ್ಟಿಯಿಂದ ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತಿದ್ದು, ಕಂದಾಯ ಮತ್ತು ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಮಂಗಳವಾರ ಹುಂಡಿ ತೆರೆಯಲಾಯಿತು. 35 ದಿನಗಳಲ್ಲಿ 25.27ಲಕ್ಷ ರೂ. ಸಂಗ್ರಹವಾಗಿದ್ದು, ಅಧಿಕ ಮಾಸದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ.
ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ತೆರೆಯಲಾಗಿದ್ದು, ವಾರದ ಹಿಂದೆ ಆನೆಗೊಂದಿ ಶ್ರೀರಂಗನಾಥ ಸ್ವಾಮಿ ಮತ್ತು ಪಂಪಾಸರೋವರದ ಜಯಲಕ್ಷ್ಮಿದೇವಾಲಯದ ಹುಂಡಿ ತೆರೆಯಲಾಗಿತ್ತು.
ಭಕ್ತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಅಭಿವೃದ್ಧಿ ಕಾರ್ಯಗಳಾಗುತ್ತಿವೆ ಎಂದರು. ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಮಹೆಬೂಬ್‌ಅಲಿ ಇತರರಿದ್ದರು.