ಅಂಜನಾದ್ರಿಯಲ್ಲಿ 11.79 ಲಕ್ಷ ರೂ. ಸಂಗ್ರಹ

01 gvt 08
ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ಜರುಗಿತು. ತಹಸೀಲ್ದಾರ್ ಮಂಜುನಾಥ ಕಂಬಾಳಿಮಠ, ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಾಲಯದ ಹುಂಡಿಯಲ್ಲಿ 11.79 ಲಕ್ಷ ರೂ.ಸಂಗ್ರಹವಾಗಿದ್ದು, ವಿದೇಶ ನಾಣ್ಯ ಮತ್ತು ನೋಟುಗಳಿವೆ. ದೇವಾಲಯದಲ್ಲಿ ಮಂಗಳವಾರ ಹಣ ಎಣಿಕೆ ಕಾರ್ಯ ನಡೆಸಲಾಯಿತು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯದ ಭದ್ರತೆ ಹಿನ್ನೆಲೆಯಲ್ಲಿ ಹುಂಡಿಯನ್ನು ತಿಂಗಳಿಗೊಮ್ಮೆ ತೆರೆಯುವ ಬಗ್ಗೆ ಜಿಲ್ಲಾಡಳಿತ ಸೂಚಿಸಿದೆ. 28 ದಿನಗಳಲ್ಲಿ 11.79ಲಕ್ಷ ರೂ. ಸಂಗ್ರಹವಾಗಿದ್ದು, ನೇಪಾಳ ಸೇರಿ ವಿವಿಧ ದೇಶಗಳ 6 ನಾಣ್ಯಗಳು ಮತ್ತು 3 ಕರೆನ್ಸಿಗಳಿವೆ.

ತಹಸೀಲ್ದಾರ್ ಮಂಜುನಾಥ ಕಂಬಾಳಿಮಠ ಅಧ್ಯಕ್ಷತೆಯಲ್ಲಿ ಹುಂಡಿ ತೆರೆಯಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯ, ಕಂದಾಯ ಸಿಬ್ಬಂದಿಯೊಂದಿಗೆ ಭಕ್ತರು ಕೈ ಜೋಡಿಸಿದರು. ಸಿಸಿ ಕ್ಯಾಮರಾ ಬಂದೋಬಸ್ತ್‌ನಲ್ಲಿ ಎಣಿಕೆ ಕಾರ್ಯ ಕೈಗೆತ್ತಿಕೊಂಡಿದ್ದು, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಕಳೆದ ತಿಂಗಳು ಹುಂಡಿ ಎಣಿಸಿದಾಗ 26.22ಲಕ್ಷ ರೂ.ಸಂಗ್ರಹವಾಗಿತ್ತು ಎಂದು ತಹಸೀಲ್ದಾರ್ ಮಂಜುನಾಥ ಕಂಬಾಳಿಮಠ ತಿಳಿಸಿದರು.

ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಅನಂತ ಜೋಶಿ, ಮಹೆಬೂಬ್ ಅಲಿ, ಕೃಷ್ಣವೇಣಿ,ಶಿವಕುಮಾರ, ನಾಗರತ್ನ, ಅನ್ನಪೂರ್ಣ, ಪವನಕುಮಾರ, ಗಾಯಿತ್ರಿ, ಸೌಭಾಗ್ಯ, ಸೈಯ್ಯದ್, ಶ್ರೀರಾಂ, ಗಾಮ ಲೆಕ್ಕಾಧಿಕಾರಿಗಳಾದ ಅಭಿಷೇಕ, ಪೂಜಾ, ಮಂಜುನಾಥ ದುಮ್ಮಾಡಿ, ಮಹಾಲಕ್ಷ್ಮೀ ಇತರರಿದ್ದರು. ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ಅತ್ಯಂತ ಕಡಿಮೆ ಸಂಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net