ಅಂಜಲಿಗೆ ಮನೆಗೆ ಗಣ್ಯರ ಭೇಟಿ ಸಾಂತ್ವನ

h18-anjali house 1
Published on

ಹುಬ್ಬಳ್ಳಿ: ಇಲ್ಲಿಯ ವೀರಾಪೂರ ಓಣಿಯ ಮೃತ ಅಂಜಲಿ ಮನೆಗೆ ಶನಿವಾರ ಗಣ್ಯರು ಹಾಗೂ ವಿವಿಧ ಮಠಾಧೀಶರ ದಂಡು ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿತು.
ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ, ಕುಂದಗೋಳದ ಶ್ರೀ ಬಸವಣ್ಣಜ್ಜನವರು ಸೇರಿದಂತೆ ಬಹಳಷ್ಟು ಮಠಾಧೀಶರು ಆಗಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಇತರ ಗಣ್ಯರು ಭೆಟಿ ನೀಡಿದರು. ಈ ವೇಳೆ ಕುಟುಂಬದವರು ಕಣ್ಣೀರು ಹಾಕುತ್ತಲೇ ಮೃತ ಅಂಜಲಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಅಂಗಲಾಚಿದರು. ನ್ಯಾಯ ಕೊಡಿಸುವ ಭರವಸೆಯನ್ನು ಆಗಮಿಸಿದ್ದ ಗಣ್ಯರು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net