ಶಿರೂರು ಮಠಕ್ಕೆ ಅನಿರುದ್ಧ ಸರಳತ್ತಾಯ ನೂತನ ಉತ್ತರಾಧಿಕಾರಿ; ಇಂದು ನಡೆಯಿತು ಪಟ್ಟಾಭಿಷೇಕದ ಪೂರ್ವಭಾವಿ ಕಾರ್ಯಕ್ರಮ

Untitled-1
Published on

ಉಡುಪಿ: ಉಡುಪಿಯ ಶಿರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಚಿ. ಅನಿರುದ್ಧ ಸರಳತ್ತಾಯರು ನಿಯೋಜನೆಗೊಳ್ಳಲಿದ್ದು, ಅವರ ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿ ಕಾರ್ಯಕ್ರಮಗಳು ಇಂದು ಉಡುಪಿಯ ಶಿರೂರು ಮೂಲ ಮಠದಲ್ಲಿ ನೇರವೇರಿದವು.

ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ದೇವತಾ ಪ್ರಾರ್ಥನೆ, ವಟುವಿಗೆ ಫಲ ಪ್ರಧಾನ, ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಪವಮಾನ ಮಂಡಲ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ, ತಿಲಹೋಮ, ಪ್ರಾಯಶ್ಚಿತ್ತ ಯಾಗಾದಿ ಕರ್ಮಾಂಗಗಳನ್ನು ನೆರವೇರಿಸಲಾಯಿತು.

ಶಿರೂರು ಮೂಲ ಮಠದಲ್ಲಿ ನಡೆದ ಈ ಎಲ್ಲ ಧಾರ್ಮಿಕ ವಿಧಿ-ವಿಧಾನಗಳನ್ನು ಅವಧಾನಿ ಸುಬ್ರಹ್ಮಣ್ಯ ಭಟ್ಟ ಹಾಗೂ ವಿದ್ವಾನ್ ಗಿರಿರಾಜ ಉಪಾಧ್ಯಾಯರು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಮೇ 14ರವರೆಗೆ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net