ಕೊಳ್ಳೇಗಾಲದ ಕಾವೇರಿ ನದಿ ಪಾತ್ರದ ಪ್ರದೇಶದಲ್ಲಿ ಸಿಲುಕಿದ ಮೂಕ ಜೀವಿಗಳು: ಮೂರು ಗ್ರಾಮ ಮುಳುಗಡೆ

Animals Trap
Published on

ಕೊಳ್ಳೇಗಾಲ: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತಾಲೂಕಿನ ಸತ್ತೇಗಾಲ ಹ್ಯಾಂಡ್ ಸಮೀಪದ ಬೈಪಾಸ್ ಸೇತುವೆ ಬಲ ಭಾಗದಲ್ಲಿ ಕಾವೇರಿ ಪ್ರವಾಹಕ್ಕೆ ದನ, ಕರುಗಳು ಸಿಲುಕಿಕೊಂಡಿವೆ.

ಕಬಿನಿ ಹಾಗೂ ಕೆಆರ್​ಎಸ್ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಕಾವೇರಿ‌ ನದಿಗೆ ಬಿಟ್ಟಿರುವ ಪರಿಣಾಮ ಕಾವೇರಿ ನದಿ ಪ್ರವಾಹದ ಮಟ್ಟ‌ದಲ್ಲಿ ಹರಿಯುತ್ತಿದೆ. ಈ‌ ನಡುವೆ ಸತ್ತೇಗಾಲ ಹ್ಯಾಡ್ ಪೋಸ್ಟ್‌ ಸಮೀಪದಲ್ಲಿರುವ ಬೈಪಾಸ್ ರಸ್ತೆಯ ಸೇತುವೆ ಬಳಿ ಮೇವು ಮೇಯಲು ತೆರಳಿದ್ದ ದನ ಕರುಗಳು ಪ್ರವಾಹಕ್ಕೆ ಸಿಲುಕಿದ್ದು. ಜೀವದ ಭಯದ ಆತಂಕದಲ್ಲಿ ಮುಳುಗಿದೆ.

ನದಿಯ ಪಾತ್ರದಲ್ಲಿ ಬೆಳಗ್ಗೆ ದನ, ಕರುಗಳು ಮೇವು ತಿನ್ನಲು ತೆರಳಿದ್ದವು. ನದಿಯಲ್ಲಿ ‌ನೀರಿನ ಪ್ರಮಾಣ ಹೆಚ್ಚಾದ್ದರಿಂದ ದನ, ಕರುಗಳಿಂದ ಸುತ್ತಲೂ ‌ಜಲಾವೃತವಾಗಿದೆ. ಯಾವ ಸಂದರ್ಭದಲ್ಲಾದರೂ ನೀರಲ್ಲಿ ಕೊಚ್ಚಿ ಹೋಗಬಹುದು. ಈ ಬಗ್ಗೆ ಜಿಲ್ಲಾಡಳಿತ ‌ಗಮನವಹಿಸಬೇಕು. ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕಿದೆ.

ಕಾವೇರಿ ಪ್ರವಾಹ, ಕೊಳ್ಳೇಗಾಲದ ಮೂರು ಗ್ರಾಮ ಮುಳುಗಡೆ

ಕಾವೇರಿ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಟ್ಟಿರುವ ಹಿನ್ನಲೆ ಬುಧವಾರ ರಾತ್ರಿ ನದಿ ಪಾತ್ರ ಗ್ರಾಮಗಳಾದ ಹಳೇ ಹಂಪಾಪುರ, ದಾಸ ನಪುರ, ಹಳೇ ಅಣಗಳ್ಳಿ ಗ್ರಾಮಗಳು ಮುಳುಗಡೆಯಾಗಿದೆ.

ತಾಲೂಕು ಹಾಗೂ ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ, ನುರಿತ ತೆಪ್ಪಗಾಗರು, ಈಜುಗಾರರು ಈ ಮೂರು ಗ್ರಾಮಗಳ ಜನರನ್ನು ಗ್ರಾಮದಿಂದ ಹೊರಗಡೆ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದು, ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೇರಿದಂತೆ ತಾಲೂಕು ಮಟ್ಟದ ಎಲ್ಲ‌ ಅಧಿಕಾರಿಗಳು ತೆಪ್ಪದ ಮೂಲಕ ಗ್ರಾಮದೊಳಗೆ ತೆರಳಿ ಮನೆ ಕಾವಲಿಗೆ ಉಳಿದುಕೊಂಡಿದ್ದ ಪುರುಷರನ್ನು ಗ್ರಾಮದಿಂದ ಹೊರಗೆ ಕಳುಹಿಸಿದ್ದಾರೆ. ದಾಸನಪುರ, ಹಳೇ ಅಣಗಳ್ಳಿ ಹಾಗೂ ಹಳೇ ಹಂಪಾಪುರ ಸಂಪರ್ಕ ಕಡಿತಗೊಳಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net