ಕಣಸಗಿರಿ ಗೋ ಶಾಲೆ ಕಾಮಗಾರಿಯಲ್ಲಿ ಅವ್ಯವಹಾರ

Goshale
Published on

ಕಾರವಾರ: ಕಣಸಗಿರಿ ಗೋ ಶಾಲೆ ನಿರ್ಮಾಣ ಕಾಮಗಾರಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎಂದು ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರಮೋಹನ ಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಜಿಲ್ಲಾ ನಿರ್ಮಿತಿ ಕೇಂದ್ರದಿಂದ 50 ಲಕ್ಷ ರೂ. ವೆಚ್ಚದಲ್ಲಿ ಗೋ ಶಾಲೆ ಕಾಮಗಾರಿ ಮಾಡಲಾಗಿದೆ. ಅಂದಾಜು ಪತ್ರಿಕೆ, ಇಎಂಬಿ ಬಿಲ್, ಥರ್ಡ್ ಪಾರ್ಟಿ ವರದಿ ಪಡೆದು ಪರಿಶೀಲಿಸಿದಾಗ ಹೆಚ್ಚುವರಿ ಖರೀದಿ, ಕಳಪೆ ಕಾಮಗಾರಿ ಕಂಡುಬಂದಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಯಂತೆ 38 ಲಕ್ಷ ಇಎಂಬಿ ಬಿಲ್ ಗಳು ಮಾತ್ರ ಕಂಡುಬಂದಿವೆ. 2022 ರಲ್ಲಿ ಪ್ರಾರಂಭವಾದ ಕಾಮಗಾರಿ 2024 ರಲ್ಲಿ ಮುಕ್ತಾಯವಾಗಿದೆ. ಹೆಚ್ಚುವರಿ ಟೈಲ್ಸ್, ಕಬ್ಬಿಣ, ಸಿಮೆಂಟ್ ಖರೀದಿಸಿರುವುದು ಕಂಡುಬಂದಿದೆ ಎಂದರು.

ಈ ಅವ್ಯವಹಾರದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಿದ್ದೇವೆ ಎಂದರು. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ, ನಡೆಸಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಲಿದ್ದೇವೆ ಎಂದರು.

ಸನಾತನ ಗೋ ರಕ್ಷಾ ಟ್ರಸ್ಟ್ ನ ಸಂದೀಪ ಗೋಕರ್ಣಕರ್ ಮಾತನಾಡಿ, ಈ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ವಹಿಸಿಲ್ಲ. ನಂತರ ನಗರಸಭೆ ಪೌರಾಯುಕ್ತರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಉತ್ತರ ಬಂತು. ಆದರೆ, ಇದುವರೆಗೂ ತನಿಖಾ ವರದಿ ಬಂದಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನೂ ನೀಡುತ್ತಿಲ್ಲ ಎಂದರು. ಹಿಂದು ಸಂಘಟನೆಗಳ ಪ್ರಮುಖರಾದ ಸಂದೀಪ ಗೋಕರ್ಣಕರ್, ಗಜೇಂದ್ರ ನಾಯ್ಕ, ಅಮಿತ್ ಮಾಳ್ಸೇಕರ್, ಸೂರ್ಯಕಾಂತ ಕಳಸ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net