

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡರಾಯಪ್ಪನಹಳ್ಳಿ ಗ್ರಾಮವನ್ನು ದತ್ತು ಪಡೆದು ಪ್ರತಿವರ್ಷ ಜಾನುವಾರಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಕೆವಿಕೆ ಬೇಸಾಯ ಶಾಸದ ವಿಜ್ಞಾನಿ ವೆಂಕಟೇಗೌಡ ಹೇಳಿದರು
ಹೋಬಳಿ ದೊಡ್ಡರಾಯಪ್ಪನಹಳ್ಳಿಯಲ್ಲಿ ಬೆಂಗಳೂರು ಕೃಷಿ ಮಹಾವಿದ್ಯಾಲಯ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ದೊಡ್ಡಬಳ್ಳಾಪುರ ಪಶುಪಾಲನೆ ಹಾಗೂ ಕೃಷಿ ವಿಶ್ವ ವಿದ್ಯಾಲಯ ಮತ್ತು ಅಂತಿಮ ವರ್ಷದ ಬಿಎಸ್‌ಸಿ, ಬಿಟೆಕ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಶು ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ದೊಡ್ಡರಾಯಪ್ಪನಹಳ್ಳಿ ಗ್ರಾಮವನ್ನು 3 ವರ್ಷ ದತ್ತು ಪಡೆದಿದ್ದೇವೆ, ಗ್ರಾಮದ ರೈತರಿಗೆ ಬೇಕಾದ ತಳಿಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ರೈತರಿಗೆ ಬೇಕಾಗಿರುವ ರಾಗಿ ತಳಿಯನ್ನು ಉಚಿತವಾಗಿ ನೀಡಿದ್ದೇವೆ ಎಂದು ಮಾಹಿತಿ ನೀಡಿದರು. ಸೇವಂತಿ ಬೆಳೆಗೆ ಅವಶ್ಯವಿರುವ ತರಬೇತಿ ನೀಡಲಾಗಿದೆ. ಹಳ್ಳಿಯ ರೈತರಿಗೆ ಜಿಕೆವಿಕೆಯಿಂದ ದೊರೆಯುವ ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ದೊರಕಿಸಿಕೊಡಲಾಗುತ್ತಿದೆ ಎಂದರು.
ೆನ್ ಮೂಲಕ ಮಾಹಿತಿ:
ಜಿಕೆವಿಕೆಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ದೂರವಾಣಿ ಮೂಲಕ ಸಂಪರ್ಕಿಸಿದರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ ಎಂದು ವೆಂಕಟೇಗೌಡ ತಿಳಿಸಿದರು.
ಹಸುಗಳಲ್ಲಿ ಕೆಚ್ಚಲು ಬಾವು, ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ಹಾಲಿನಲ್ಲಿ ಪ್ಯಾಟ್ ಬರುವುದಿಲ್ಲ, ಉತ್ತಮ ಕ್ಯಾಲ್ಸಿಯಂ ಇರುವ ಮುಸುಕಿನ ಜೋಳ, ಅವರೆಕಾಯಿ ಹಸಿ ಮೇವುಗಳನ್ನು ಜಾನುವಾರುಗಳಿಗೆ ನೀಡಿದರೆ ಗುಣಮಟ್ಟದ ಹಾಲು ಕರೆಯಬಹುದು ಹಾಗೂ ಜಾನುವಾರು ಆರೋಗ್ಯವಾಗಿರುತ್ತವೆ ಎಂದು ಸಲಹೆ ನೀಡಿದರು.