ಪ್ರಾಣಿ ಸಂಕುಲ ರಕ್ಷಣೆ ನಮ್ಮ ಕರ್ತವ್ಯ

7 Jaggu 6-Web
ರಾಣಿ ಚನ್ನಮ್ಮ ವಿವಿಯು ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದ ಸಿಂಹ ‘ನಿರುಪಮ’ವನ್ನು ಜೀವಿತಾವಧಿವರೆಗೆ ದತ್ತು ಪಡೆಯಿತು. ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ಪ್ರೊ. ಬಸವರಾಜ ಪದ್ಮಶಾಲಿ, ಪ್ರೊ. ಎಸ್.ಎಂ. ಹುರಕಡ್ಲಿ, ಕಿತ್ತೂರ ರಾಣಿ ಚನ್ನಮ್ಮ ಕಿರು ಮೃಗಾಲಯ ಬೆಳಗಾವಿ ವಿಭಾಗದ ಕಾರ್ಯ ನಿರ್ವಾಹಕ ನಿರ್ದೆಶಕ ಎಂ.ವಿ. ಅಮರನಾಥ ಇದ್ದರು.
Published on

ಬೆಳಗಾವಿ: ಪ್ರಾಣಿಗಳ ಸಂತತಿ ಅಳಿವಿನಂಚಿನಲ್ಲಿದ್ದು, ಪ್ರಾಣಿ ಸಂಕುಲ ರಕ್ಷಿಸಿ ಪೋಷಿಸುವುದು ನಮ್ಮಲ್ಲರ ಕರ್ತವ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹುತಾತ್ಮರ ಸ್ಮರಣೆಗಾಗಿ ಭೂತರಾಮನಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿರುವ ಸಿಂಹಕ್ಕೆ ನಿರುಪಮ (ಚನ್ನಮ್ಮ) ಎಂಬ ಹೆಸರಿಟ್ಟು ಸಿಂಹವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಜೀವಿತಾವಧಿವರೆಗೆ ದತ್ತು ತೆಗೆದುಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಪ್ರಾಣಿಯನ್ನು ದತ್ತು ಸ್ವೀಕರಿಸಿರುವ ಏಕೈಕ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಾತ್ರವಾಗಿದೆ ಎಂದರು.

ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ ಮಾತನಾಡಿ, ಸ್ವಾತಂತ್ರೃ, ಹುತಾತ್ಮರ ಸ್ಮರಣೆ ಹಾಗೂ ಜೀವ ಸಂಕುಲದ ರಕ್ಷಣೆಯ ಉದ್ದೇಶದಿಂದ ಈ ಸಿಂಹವನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಈ ಸಿಂಹದ ಜೀವಿತಾವಧಿವರೆಗೂ ವಿವಿ ಅದರ ಖರ್ಚು, ವೆಚ್ಚ ಭರಿಸುತ್ತದೆ ಎಂದು ತಿಳಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ್, ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ ಬೆಳಗಾವಿ ವಿಭಾಗದ ಕಾರ್ಯ ನಿರ್ವಾಹಕ ನಿರ್ದೆಶಕ ಎಂ.ವಿ.ಅಮರನಾಥ, ಮಲ್ಲಿನಾಥ ಕುಸನಾಳ, ಎಸಿಎಫ್ ರಾಕೇಶ ಅರ್ಜುನವಾಡ ಹಾಗೂ ವಿವಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net