Animal Ambulance 1962 ನಿಂದ ಹೈನುಗಾರರ ಸಮಸ್ಯೆಗೆ ಸ್ಪಂದನೆಯಿಲ್ಲ

Animal Ambulance
Published on

ಕಾರವಾರ: ಹೈನುಗಾರರಿಗೆ ವರದಾನವಾಗಬೇಕಿದ್ದ ಪಶು ಸಂಜೀವಿನಿ ಆಂಬುಲೆನ್ಸ್ Animal Ambulance ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ.

ಅನಾರೋಗ್ಯ ಪೀಡಿತ ಜಾನುವಾರುಗಳಿರುವಲ್ಲಿಗೇ ತೆರಳಿ ಚಿಕಿತ್ಸೆ ನೀಡುವ ಸಲುವಾಗಿ ಪಶು ಸಂಜೀವಿನಿ ಎಂಬ ಆಂಬುಲೆನ್ಸ್ ಸೇವೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಆರಂಭಿಸಲಾಗಿತ್ತು. 1962 ಗೆ ಕರೆ ಮಾಡಿದರೆ ಕರೆ ಸ್ವೀಕರಿಸಿ, ಸಮೀಪದ ಪಶು ಆಂಬುಲೆನ್ಸ್ನ್ನು ಸ್ಥಳಕ್ಕೆ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿತ್ತು.

ಪುಣೆ ಮೂಲದ ಎಜು ಸ್ಪಾರ್ಕ್ ಇಂಟರನ್ಯಾಶನಲ್ ಸಂಸ್ಥೆಯು ಕರೆ ಮತ್ತು ವಾಹನ ನಿರ್ವಹಣೆಯ ಗುತ್ತಿಗೆ ಪಡೆದಿತ್ತು. ಉತ್ತರ ಕನ್ನಡ ಜಿಲ್ಲೆಗೆ 13 ಆಂಬುಲೆನ್ಸ್ಗಳನ್ನು ಪೂರೈಕೆ ಮಾಡಿ ಕಳೆದ ವರ್ಷ ಖಾಸಗಿ ಕಂಪನಿಯ ಮೂಲಕ ಈ ಸೇವೆ ಆರಂಭವಾಗಿತ್ತು. ಆಂಬುಲೆನ್ಸ್ನಲ್ಲಿ ಒಬ್ಬ ಪಶು ವೈದ್ಯ, ಒಬ್ಬ ಸಹಾಯಕ, ತಂತ್ರಜ್ಞ, ಚಾಲಕರನ್ನು ಖಾಸಗಿ ಕಂಪನಿಯ ಮೂಲಕವೇ ನಿಯೋಜಿಸಲಾಗಿತ್ತು.

ಆಂಬುಲೆನ್ಸ್ ಒಳಗೆ ಸ್ಕ್ಯಾನಿಂಗ್ ಯಂತ್ರ, ಶಸ್ತ್ರಚಿಕಿತ್ಸಾ ವಿಭಾಗ, ಪ್ರಯೋಗಾಲಯ ಸೇರಿ ಹಲವು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿತ್ತು. ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆ ಇದ್ದರೂ ಕರೆ ಸ್ವೀಕರಿಸುವ ಪದ್ಧತಿ ಸಮರ್ಪಕವಾಗಿಲ್ಲ. ಇದರಿಂದ ಪಶು ಆಂಬುಲೆನ್ಸ್ ಅಗತ್ಯವಿದ್ದರೂ ಬಳಕೆಯಾಗುತ್ತಿಲ್ಲ.

Animal Ambulance 1962ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಕರೆ ನಿರ್ವಾಹಕರು ಬೇರೆ ಕರೆಯಲ್ಲಿ ತೊಡಗಿದ್ದಾರೆ ಎಂಬ ಉತ್ತರ ಸಾಕಷ್ಟು ಬಾರಿ ಬರುತ್ತಿದೆ. ಇದರಿಂದ ಗ್ರಾಮೀಣ ಭಾಗದ ಪಶುಗಳಿಗೆ ಸಮಸ್ಯೆಯಾಗಿದೆ. ದಿನಕ್ಕೆ ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸದ ಪರಿಸ್ಥಿತಿ ಇದೆ. ಇದರಿಂದ ಅನಿವಾರ್ಯವಾಗಿ ಖಾಸಗಿ ವೈದ್ಯರ ಮೊರೆ ಹೋಗಬೇಕಾದ ದುಸ್ಥಿತಿ ಇದೆ ಎಂಬುದು ರೈತರ ಗೋಳು. ಕರೆ ಸ್ವೀಕರಿಸುವ ಸಮಸ್ಯೆಯಿಂದ ಪಶು ಆಂಬುಲೆನ್ಸ್ ಸೇವೆ ಹಲವು ಬಾರಿ ಸಿಗುತ್ತಿಲ್ಲ.

ಪಶು ವೈದ್ಯರ ತೀವ್ರ ಕೊರತೆ ನೀಗಿಸದ  Animal Ambulance

ಜಿಲ್ಲೆಯಲ್ಲಿ ಪಶು ವೈದ್ಯಕೀಯ ಇಲಾಖೆ ತೀವ್ರವಾಗಿ ಸೊರಗಿದೆ. ವೈದ್ಯರ ಹಾಗೂ ಸಿಬ್ಬಂದಿಯ ತೀವ್ರ ಕೊರತೆ ಇದೆ. ಕೆಲವು ತಾಲೂಕುಗಳಿಗೂ ಪಶು ವೈದ್ಯರಿಲ್ಲ. ಜಿಲ್ಲೆಯಲ್ಲಿ ಒಟ್ಟು 129 ಪಶು ವೈದ್ಯರ ಹುದ್ದೆಗಳಿವೆ. ಅದರಲ್ಲಿ ಕೇವಲ 32 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 215 ಅರೆ ವೈದ್ಯಕೀಯ ಸಿಬ್ಬಂದಿಗಳಲ್ಲಿ 76 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಬಹುತೇಕ ಪಶು ಆಸ್ಪತ್ರೆಗಳು ಬಾಗಿಲು ಹಾಕಿಕೊಂಡೇ ಇರುವ ಪರಿಸ್ಥಿತಿ ಇದೆ. ಒಬ್ಬ ವೈದ್ಯ ಅರ್ಧ ತಾಲೂಕಿನ ಸುಮಾರು 20 ಸಾವಿರಕ್ಕೂ ಅಧಿಕ ಪಶುಗಳನ್ನು ನಿಭಾಯಿಸುವ ಪರಿಸ್ಥಿತಿ ಇದೆ. ಈ ಕ್ಷೇತ್ರದಲ್ಲಿ ಹೆಚ್ಚು ಖಾಸಗಿ ವೈದ್ಯರೂ ಇಲ್ಲದ ಕಾರಣ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ.

ಪಶು ಸಂಜೀವಿನಿ ಯೋಜನೆ ಕುರಿತು ಇಲಾಖೆಯಿಂದ ವ್ಯಾಪಕ ಪ್ರಚಾರ ಮಾಡಲಾಗಿದೆ. ಆದರೆ ತುರ್ತು ಕರೆಗಳನ್ನು ಸ್ವೀಕರಿಸದ ಬಗ್ಗೆ ಹೈನುಗಾರರಿಂದ ದೂರುಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದ್ದು, ಹಿರಿಯ ಅಽಕಾರಿಗಳಿಗೆ ತಿಳಿಸಲಾಗಿದೆ ಡಾ.ಮೋಹನ ಕುಮಾರ್ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಇದನ್ನೂ ಓದಿ: https://www.vijayavani.net/shivanna-watched-the-movie-bhairati-rangal

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net