ಅಂಬೇಡ್ಕರ ಅವರಿಗೆ ಸಂಬಂಧಿಸಿದ ಪಂಚಕ್ಷೇತ್ರ ಅಭಿವೃದ್ಧಿ ಪಡಿಸಿದ್ದು ಬಿಜೆಪಿ: ಅನಿಲ ಮೆಣಸಿನಕಾಯಿ

oplus_2
oplus_2
Published on

ಗದಗ:

ದಲಿತರನ್ನು ಮತಬ್ಯಾಂಕ್ ಆಗಿ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಬಳಸುತ್ತಿದೆ. ಕಾಂಗ್ರೆಸ್ ಪಕ್ಷ ಸುಡುವ ಮನೆ ಇದ್ದಂತೆ. ಆ ಮನೆಯಲ್ಲಿ ಇದ್ದರೆ ಸುಟ್ಟು ಬೂದಿ ಆಗುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಬಿಜೆಪಿ ನಾಯಕ ಅನಿಲ ಮೆಣಸಿನಕಾಯಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಂದ ಜೆಜೆಪಿ ಪಕ್ಷ ಅಂಬೇಡ್ಕರ್ ಅವರ ಮೇಲೆ ಪ್ರೀತಿ ಇಟ್ಟುಕೊಂಡ ಪಕ್ಷವಾಗಿದೆ. ನಕಲಿ ವಿಡಿಯೋ ಗಳನ್ನು ಹರಿಬಿಟ್ಟು ಬಿಜೆಪಿ ಅಂಬೇಡ್ಕರ್ ವಿರೋಧಿ ಎಂದು ತಪ್ಪು ಬಿಂಬಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಬಿಜೆಪಿ ಸರ್ಕಾರವು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಪಂಚಕ್ಷೇತ್ರವನ್ನು ಅಭಿವೃದ್ಧಿ ಪಡಿಸಿತು. ವಾಜಪೇಯಿ ಅವರ ಶಿಫಾರಸ್ಸಿನ ಮೇರೆಗೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಾಯಿತು. ಅಂಬೇಡ್ಕರ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಚುನಾವಣಾ ಏಜೆಂಟ್ ಆಗಿದ್ದವರು ಆರ್ ಎಸ್ ಎಸ್ ವ್ಯಕ್ತಿ. ಸಂವಿಧಾನದ ದಿನಾಚರಣೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಹೀಗೆ ದಲಿತ, ಹಿಂದುಳಿದ ಸಮುದಾಯಕ್ಕೆ ಬಿಜೆಪಿ ಬೆಂಬಲ ನೀಡುತ್ತಲೆ ಬಂದಿದೆ. ಅಹಿಂದ ಎಂದರೆ ಕೇವಲ ಕಾಂಗ್ರೆಸ್ ಪಕ್ಷ ಅಲ್ಲ. ಬಿಜೆಪಿ ಪಕ್ಷಕ್ಕೆ ಅಧಿಕ ಅಹಿಂದ ವರ್ಗದ ಬೆಂಬಲವಿದೆ ಎಂದು ಅನಿಲ ಮೆಣಸಿನಕಾಯಿ ಹೇಳಿದರು.

ಅಂಬೇಡ್ಕರ್ ಅವರ ಆದರ್ಶಗಳನ್ನು ಬಿಜೆಪಿ ಪಕ್ಷ ಅಳವಡಿಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ತಂದ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೆ ತಲುಪುವಂತವುಗಳಾಗಿವೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಶಿಶುನಾಳ ಷರೀಫರ ನಾಡಿನಿಂದ ಬಂದವರು. ಅವರ ಆದರ್ಶಗಳನ್ನು ಬೊಮ್ಮಾಯಿ ಅವರಲ್ಲಿ ಕಾಣುತ್ತೇವೆ ಎಂದರು.

ಎಸ್ಸಿ ಮೋರ್ಚಾ ಜಿಲ್ಲಾ ಧ್ಯಕ್ಷ ಮಂಜುನಾಥ ಮುಳಗುಂದ ಮಾತನಾಡಿ, ದಲಿತ ಮತ್ತು ಹಿಂದುಳಿದ ವರ್ಗಗಳನ್ನು ತಮ್ಮ ಲಾಭಕ್ಕಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಲೇ ಬಂದಿದೆ. ಇದರಿಂದ ದಲಿತ ಸಮುದಾಯಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಬಿಜೆಪಿ ಪಕ್ಷದಿಂದಲೇ ದಲಿತ, ಹಿಂದುಗಳ ವರ್ಗಗಳ ಅಭಿವೃದ್ಧಿ ಸಾಧ್ಯ ಎಂದರು.

ಅನಿಲ ಅಬ್ಬಿಗೇರಿ, ಕಾಂತಿಲಾಲ್ ಬನ್ಸಾಲಿ ಇತರರು ಇದ್ದರು

ನಗರಕ್ಕೆ ಗೋವಿಂದ ಕಾರಜೋಳ:
ಮೇ 3 ಮತ್ತು 4 ರಂದು ನಗರದಲ್ಲಿ ಕಾರಜೋಳ ಹಾಗೂ ಚಲವಾದಿ ನಾರಾಯಣ ನೇತೃತ್ವದಲ್ಲಿ ಎರಡು ದಿನಗಳ ಕಾಲ ಬೆಟಗೇರಿಯಲ್ಲಿ ಸಮಾವೇಶ, ದಲಿತ ಸಮುದಾಯದಗಳ ಜತೆ ಚರ್ಚೆ ಸಂವಾದ ನಡೆಯಲಿವೆ ಎಂದು ಮೆಣಸಿನಕಾಯಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net