ಕನ್ನಡಿಗ ಅನಿಲ್ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

Anil Hegde
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅನಿಲ್ ಹೆಗ್ಡೆ ಅವರಿಗೆ ಸದಸ್ಯತ್ವ ಪ್ರಮಾಣಪತ್ರ ನೀಡಿದರು.
Published on

ಕುಂದಾಪುರ (ಉಡುಪಿ): ತಾಲೂಕಿನ ಸಳ್ವಾಡಿ ಮೂಲದ ಅನಿಲ್ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಾ.ಮಹೇಂದ್ರ ಪ್ರಸಾದ್ ನಿಧನದಿಂದ ತೆರವಾದ ರಾಜ್ಯಸಭೆ ಸ್ಥಾನಕ್ಕೆ ಜೆಡಿಯು ಪಕ್ಷದ ತಳಮಟ್ಟದ ನಾಯಕ ಅನಿಲ್ ಹೆಗ್ಡೆ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಮನಿರ್ದೇಶನ ಮಾಡಿದ್ದರು.

ಅನಿಲ್ ಹೆಗ್ಡೆ ಜೆಡಿಯು ಮತ್ತು ಚುನಾವಣಾ ಆಯೋಗದ ನಡುವೆ ಸಂಯೋಜಕರಾಗಿದ್ದರು. ಹಲವು ವರ್ಷಗಳಿಂದ ಪಾಟ್ನಾದ ಜೆಡಿಯು ಕಚೇರಿಯಲ್ಲಿ ವಾಸ್ತವ್ಯವಿದ್ದು, ಜಾರ್ಜ್ ಫರ್ನಾಂಡಿಸ್ ಅನುಯಾಯಿಯೂ ಆಗಿದ್ದರು. ಇವರು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಸಂಬಂಧಿಕರು.

ಸಾಮಾಜಿಕ, ಆರ್ಥಿಕ ಅಸಮಾನತೆ ಹೋಗಲಾಡಿಸಬೇಕು. ಹಳ್ಳಿ-ನಗರಗಳ ಅಂತರ ಕಡಿಮೆಯಾಗಬೇಕು. ಚಿಕ್ಕ ಗ್ರಾಮಗಳಲ್ಲೂ ಉದ್ಯೋಗ ಸೃಷ್ಟಿ ಆಗಬೇಕು. ಈ ನಿಟ್ಟಿನಲ್ಲಿ ಬಿಹಾರ ಹಾಗೂ ಹುಟ್ಟೂರಲ್ಲಿ ಏನಾದರೂ ಮಾಡಲು ಸಾಧ್ಯವೇ ಎನ್ನುವ ಯೋಚನೆ ಮಾಡಲಾಗುತ್ತದೆ. ಭತ್ತದ ಕೃಷಿ ಅಭಿವೃದ್ದಿಗೆ ಒತ್ತು ನೀಡಲಾಗುತ್ತದೆ. | ಅನಿಲ್ ಹೆಗ್ಡೆ ರಾಜ್ಯಸಭಾ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net