ಕಾಳಜಿ ಕೇಂದ್ರಕ್ಕೆ ಅನಿಲ್ ಚಿಕ್ಕಮಾದು ಭೇಟಿ

20HDK00008
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
Published on

ಎಚ್.ಡಿ.ಕೋಟೆ : ಕಾಳಜಿ ಕೇಂದ್ರದಲ್ಲಿ ಸೌಲಭ್ಯ ಇಲ್ಲದೆ ಇದ್ದರೆ ಯಾರೂ ಬರುವುದಿಲ್ಲ. ಮೊದಲು ಮೂಲ ಸೌಕರ್ಯ ಒದಗಿಸಿ, ನಂತರ ನಿರಾಶ್ರಿತರು ಬರುತ್ತಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಶನಿವಾರ ತಾಲೂಕಿನ ಡಿ.ಬಿ ಕುಪ್ಪೆ ಗ್ರಾಮದ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ನಿರಾಶ್ರಿತರಿಗಾಗಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಚನೆ ನೀಡಿದರು.


ಮತ್ತೆ ಮಳೆಯಾಗುವ ಸೂಚನೆ ಇದ್ದು, ಕಾಳಜಿ ಕೇಂದ್ರದಲ್ಲಿ ಹಾಸಿಗೆ, ದಿಂಬು, ಚಾಪೆ, ಅಡುಗೆ ಪಾತ್ರೆಗಳು, ಅಡುಗೆಯವರು, ವಿದ್ಯುತ್ ಸೇರಿದಂತೆ ಸೌಕರ್ಯಗಳನ್ನು ಕಲ್ಪಿಸಬೇಕು. ಆಗ ಮಾತ್ರ ನಿರಾಶ್ರಿತರು ಕಾಳಜಿ ಕೇಂದ್ರಕ್ಕೆ ಬಂದು ಸೌಲಭ್ಯ ಪಡೆಯುತ್ತಾರೆ. ಅತಿಯಾದ ಮಳೆಯಿಂದ ಈ ಭಾಗದಲ್ಲಿ ರಸ್ತೆ, ಚರಂಡಿ, ಮನೆ, ಅಂಗಡಿ ಮುಂಗ್ಗಟ್ಟುಗಳು, ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳು ಹೆಚ್ಚಿನ ರೀತಿಯಲ್ಲಿ ಹಾನಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದರು.


ತಹಸೀಲ್ದಾರ್ ಶ್ರೀನಿವಾಸ್, ಇಒ ಧರಣೇಶ್, ಎಸಿಎಪ್ ರಂಗಸ್ವಾಮಿ ಆರ್‌ಎಫ್‌ಒ ಮಧು, ನೀರಾವರಿ ಅಧಿಕಾರಿ ಇಇ ಚಂದ್ರಶೇಖರ್, ಎಇಇ ಗಣೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net