ಕಬಿನಿ ಜಲಾಶಯಕ್ಕೆ ಅನಿಲ್ ಚಿಕ್ಕಮಾದು ಭೇಟಿ

20HDK0008
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ಎಚ್.ಡಿ.ಕೋಟೆ : ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಬಿಡಬೇಕಾದ ನೀರನ್ನು ಕಬಿನಿ ಜಲಾಶಯ ಒಂದರಲ್ಲೇ ಹರಿಸಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕಿನ ಕಬಿನಿ ಜಲಾಶಯಕ್ಕೆ ಶನಿವಾರ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿ ಮಾತನಾಡಿದರು.


ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯಕ್ಕೆ ಹೆಸರು ವಾಸಿಯಾದ ಕಬಿನಿ ಜಲಾಶಯ, ಜುಲೈ ಮೊದಲ ವಾರದಲ್ಲಿ ತುಂಬಿದೆ. ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದಿಂದ ಜುಲೈ ತಿಂಗಳಲ್ಲಿ ನೀಡಬೇಕಾಗಿದ್ದ ನೀರಿನ ಪೈಕಿ ಕಬಿನಿ ಜಲಾಶಯ ಒಂದರಲ್ಲೇ 25 ಟಿಎಂಸಿ ನೀರನ್ನು ಬಿಡುವ ಮೂಲಕ ರಾಜ್ಯದ ಗೌರವವನ್ನು ಕಾಪಾಡಲಾಗಿದೆ ಎಂದರು.

27 ಕ್ಕೆ ಮುಖ್ಯಮಂತ್ರಿಗಳು ಕಬಿನಿ ಜಲಾಶಯಕ್ಕೆ ಅಗಮಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಜಲಾಶಯದ ಮುಂಭಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ, ಭೂಮಿ ಪೂಜೆ ಮಾಡಲಾಗುತ್ತದೆ ಎಂದರು.


ಜಲಾಶಯದ ಮುಳುಗಡೆ ಆಗಿ ನಿರಾಶ್ರಿತರಾದ 47 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಮನೆ ಕಟ್ಟಿಕೊಡಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಬಿನಿ ಇಇ ಚಂದ್ರಶೇಖರ್, ತಹಸೀಲ್ದಾರ್ ಶರೀನಿವಾಸ್, ಎಇಇ ಗಣೇಶ್, ಎಇ ರಮೇಶ್ ಬಾಬು, ವಿಶ್ವನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net