ಹಿಂದು ಸಂಘಟನೆಗಳ ಪುಟ ಸ್ಥಗಿತ: ಫೇಸ್‌ಬುಕ್ ವಿರುದ್ಧ ಆಕ್ರೋಶ

Facebook Logo
Published on

ಮಂಗಳೂರು: ಫೇಸ್‌ಬುಕ್ ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಹಿಂದು ನಾಯಕರು ಮತ್ತು ಹಿಂದು ಸಂಘಟನೆಗಳ ಪುಟಗಳನ್ನು ಯಾವುದೇ ಕಾರಣ ನೀಡದೆ ಸ್ಥಗಿತಗೊಳಿಸಿದೆ. ಇನ್ನೊಂದೆಡೆ ಕೋಮು ದ್ವೇಷ ಹುಟ್ಟಿಸುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್, ಪಿಎಫ್‌ಐ ಸಂಘಟನೆಗಳ ಖಾತೆಗಳನ್ನು ಮುಂದುವರಿಸಿದೆ. ಸಂಸ್ಥೆಯ ಈ ಸ್ವೇಚ್ಛಾವರ್ತನೆ ಆತಂಕಕಾರಿಯಾಗಿದ್ದು, ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕಾರ ಚಂದ್ರ ಮೊಗೇರ ತಿಳಿಸಿದ್ದಾರೆ.

ದ.ಕ ಜಿಲ್ಲೆಯ ಹಿಂದು ಜನಜಾಗೃತಿ ಸಮಿತಿ ಮತ್ತು ಸನಾತನ ಪ್ರಭಾತ ನಿಯತಕಾಲಿಕೆಯ ಫೇಜ್‌ಗಳ ಮೇಲೆ ಕೂಡಾ ಫೇಸ್‌ಬುಕ್ ನಿರ್ಬಂಧ ಹೇರಿದೆ. ಇದನ್ನು ಖಂಡಿಸಿ ಆನ್‌ಲೈನ್ ಅಭಿಯಾನ ನಡೆಯುತ್ತಿದ್ದು, ಫೇಸ್‌ಬುಕ್ ಪೇಜ್ ಮೇಲಿನ ನಿರ್ಬಂಧ ಹಿಂಪಡೆಯುವರೆಗೆ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net