ಅಂಗನವಾಡಿಗಳ ಮೂಲಕ ಸಮೀಕ್ಷೆಯಾಗಲಿ

27 SIRGUPPA 03
ಕೆ.ಈರಮ್ಮ
Published on

ಸಿರಗುಪ್ಪ: ರಾಜ್ಯ ದೇವದಾಸಿ ವಿಮೋಚನಾ ಸಂಘದ ನಿರಂತರ ಹೋರಾಟಕ್ಕೆ ಮನ್ನಣೆ ನೀಡಿ, ರಾಜ್ಯ ಸರ್ಕಾರ ಮರು ಸಮೀಕ್ಷೆ ಕೈಗೊಂಡಿದೆ ಎಂದು ವಿಮುಕ್ತ ದೇವದಾಸಿ ವಿಮೋಚನಾ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕೆ.ಈರಮ್ಮ ತಿಳಿಸಿದ್ದಾರೆ.

ವಿಮುಕ್ತ ದೇವದಾಸಿಯರು ಮತ್ತು ಅವರ ಕುಟುಂಬದ ಸದಸ್ಯರು ಮರು ಸಮೀಕ್ಷೆಯಿಂದ ಹೊರಗುಳಿಯದಂತೆ ಸೂಕ್ತ ಕ್ರಮ ವಹಿಸಬೇಕು. ಸಮೀಕ್ಷೆಯಲ್ಲಿ ವಯಸ್ಸಿನ ಮಿತಿಗಳನ್ನು ಅಳವಡಿಸಬಾರದು. ಈಗಾಗಲೇ ಮೃತರಾದ ವಿಮುಕ್ತ ದೇವದಾಸಿಯರ ಕುಟುಂಬದವರನ್ನೂ ಸಮೀಕ್ಷೆಗೆ ಒಳಪಡಿಸಬೇಕು.

ಆನ್‌ಲೈನ್ ಮೂಲಕ ಸಮೀಕ್ಷೆ ಮಾಡುವ ವಿಧಾನದಿಂದ ಹಲವು ತೊಂದರೆ ಉಂಟಾಗುತ್ತದೆ. ಆದ್ದರಿಂದ, ಅಂಗನವಾಡಿ ಕೇಂದ್ರಗಳ ಮೂಲಕವೇ ಮರು ಸಮೀಕ್ಷೆ ಅರ್ಜಿ ಭರ್ತಿಗೆ ಕ್ರಮವಹಿಸಬೇಕು. ಪುನರ್ವಸತಿ ಕೈಗೊಳ್ಳುವಾಗ ಪರಿತ್ಯಕ್ತ ಮಹಿಳೆಯರು, ಮದುವೆಯಾಗದೆ ಉಳಿದ ಮಹಿಳೆಯರನ್ನೂ ದೇವದಾಸಿಯರ ಮಾದರಿಯಲ್ಲಿಯೇ ಪರಿಗಣಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net