ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

NVL PROTEST ANGANWADI
Published on

ನವಲಗುಂದ: ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ನೀಡಿದ ಭರವಸೆಯಂತೆ ಮಾಸಿಕ 15 ಮತ್ತು 10 ಸಾವಿರ ರೂ.ಗಳ ಗೌರವಧನ ಹೆಚ್ಚಿಸುವುದು, ನಿವೃತ್ತರಿಗೆ 2 ಲಕ್ಷ ರೂ.ಗಳ ಇಡಗಂಟು ನೀಡುವುದು ಹಾಗೂ ಮಾಸಿಕ 5 ಸಾವಿರ ರೂ.ಗಳ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಶಿಶು ಅಭಿವೃದ್ಧಿ ಅಧಿಕಾರಿ ಗ್ರಾಯತ್ರಿ ಪಾಟೀಲ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್ ಅಧ್ಯಕ್ಷೆ ಶಂಕ್ರಮ್ಮ ಹಿರೇಮಠ, ಬೇರೆ ಇಲಾಖೆಗಳಿಗಾಗಿ ಅಂಗನವಾಡಿ ಶಿಕ್ಷಕಿಯರನ್ನು ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಕಳಪೆ ಗುಣಮಟ್ಟದ ಮೊಬೈಲ್​ಗಳನ್ನು ವಾಪಸ್ ಪಡೆದು ಗುಣಮಟ್ಟದ ಮಿನಿ ಟ್ಯಾಬ್​ಗಳನ್ನು ನೀಡಬೇಕು, ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳ ಗುಣಮಟ್ಟ ಹಾಗೂ ಗಾತ್ರವು ಕಳಪೆ ಮಟ್ಟದ್ದಾಗಿದ್ದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ, ಸಮಯಕ್ಕೆ ಸರಿಯಾಗಿ ಸರಬರಾಜು ಆಗದಿರುವುದರಿಂದ ಮೊಟ್ಟೆ ಪೂರೈಕೆಯನ್ನು ಬಾಲ ವಿಕಾಸ ಸಮಿತಿಗೆ ವಹಿಸಬೇಕು. ದೀರ್ಘ ಕಾಲದವರೆಗೆ ಒಂದೇ ಸ್ಥಳದಲ್ಲಿರುವ ಅಧಿಕಾರಿಗಳು ಹಾಗೂ ಮೇಲ್ವಿಚಾರಕರನ್ನು ವರ್ಗಾವಣೆ ಮಾಡಬೇಕು. ಬಾಡಿಗೆ ಸ್ಥಳದಲ್ಲಿ ನಡೆಯುತ್ತಿರುವ ಕೆಲವು ಅಂಗನವಾಡಿ ಕೇಂದ್ರಗಳ 8-9 ತಿಂಗಳ ಬಾಡಿಗೆ ಹಣ ಪಾವತಿಸಿದ್ದ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತಿ ಹಳೆಮನಿ, ಶಂಕ್ರಮ್ಮ ಹುಬ್ಬಳ್ಳಿ, ಗಂಗಮ್ಮ ಭದ್ರಾಪೂರ, ಜಯಲಕ್ಷ್ಮೀ ಲಾಂಡೆ, ರೇಣುಕಾ ಶ್ರೀಹರಿ, ಗಿರಿಜಾ ಹುಲ್ಲೂರ, ಶಿವಲೀಲಾ ಅಂಗಡಿ, ಮಂಜುಳಾ ಒಂಟೆಲಿ, ರಂಜಾನಬೀ ಮೊಕಾಶಿ, ಪಾರ್ವತಿ ಭರಮಗೌಡರ ಸೇರಿ ನೂರಾರು ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net