ಅಂಗನವಾಡಿ ಕಾರ್ಯಕರ್ತೆ-ಅಧಿಕಾರಿ ಸಂಭಾಷಣೆ ವಿಡಿಯೋ ವೈರಲ್

3-kgl-5,
ಸಿಡಿಪಿಒ ನಂಜಮಣಿ ಸಮ್ಮುಖದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಣ ಹಂಚಿಕೆ ಮಾಡುತ್ತಿರುವುದು.
Published on

ಕೊಳ್ಳೇಗಾಲ: ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಡಿಪಿಒ ನಂಜಮಣಿ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.

ಸಿಡಿಪಿಒ ನಂಜಮಣಿ ಉಪಸ್ಥಿತಿಯಲ್ಲಿ ಇಲಾಖೆಯ ಮೇಲ್ವಿಚಾರಕಿ ಪೂರ್ಣಿಮಾ, ಪೋಷಣಾ ಅಭಿಯಾನ ಸಂಯೋಜಕ ಫನೀಷ್ ಅವರು 10ಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಹಣ ಹಂಚಿಕೆ ಮಾಡುವುದನ್ನು ಸ್ಥಳದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ರೇಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೀಡಾಗಿದೆ.

ವಿಡಿಯೋ ವೈರಲ್ ಕುರಿತು ವಿಜಯವಾಣಿ ಸಿಡಿಪಿಒ ಅನ್ನು ಸಂಪರ್ಕಿಸಿದಾಗ ಸಿಡಿಪಿಒ ನಂಜಮಣಿ ಪ್ರತಿಕ್ರಿಯಿಸಿ, ನ.22ರಲ್ಲಿ ಸಿಡಿಪಿಒ ಕಚೇರಿಯಲ್ಲಿ ಮೇಲ್ವಿಚಾರಕಿ ಪೂರ್ಣಿಮಾ ಅವರ ನೇತೃತ್ವದಲ್ಲಿ ಮಾರ್ಟಳ್ಳಿ, ದೊಡ್ಡಿಂದುವಾಡಿ ಹಾಗೂ ಕಾಮಗೆರೆ ವೃತ್ತ ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆದಿತ್ತು. ಈ ವೇಳೆ 3 ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಪ್ರವಾಸ ತೆರಳಲು ಈಗಾಗಲೇ ಚಿಂತಿಸಿ ಹಣವನ್ನು ಕ್ರೋಡೀಕರಿಸಿದ್ದಾರೆ ಎಂಬ ಮಾಹಿತಿ ನನಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರವಾಸ ಹೋದರೆ ಕೇಂದ್ರದ ಚಟುವಟಿಕೆಗೆ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸ ಹೋಗುವುದು ಬೇಡ. ಹಣವನ್ನು ಹಿಂತೆಗೆದುಕೊಳ್ಳಿ ಎಂದು ಕಾರ್ಯಕರ್ತೆಯರಿಗೆ ತಿಳಿಸಿದ್ದೇನೆ. ಈ ವಿಡಿಯೋ ವೈರಲ್ ಆಗಿದ್ದು. ಇದಕ್ಕೆ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಸರಬರಾಜು ಹಣವನ್ನು ಅಧಿಕಾರಿಗಳು ನಿಯಮಬಾಹಿರವಾಗಿ ಅಂಗನವಾಡಿ ಕಾರ್ಯಕರ್ತೆಯರ ಕೈಗೆ ನೀಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net