ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಒದಗಿಸಿ

Untitled design (8)
ಮಾನ್ವಿ ತಹಸೀಲ್ದಾರ್ ರಾಜು ಪಿರಂಗಿಗೆ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ಮನವಿ ಸಲ್ಲಿಸಿತು. ಫೆಡರೇಶನ್ ತಾಲೂಕು ಅಧ್ಯಕ್ಷೆ ಚನ್ನಮ್ಮ ಗುತ್ತೆದಾರ, ಸರಸ್ವತಿ, ನಾಗಮ್ಮ, ವೆಂಕಮ್ಮ, ಪಾರ್ವತಿ ಇನ್ನಿತರರಿದ್ದರು.
Published on

ಮಾನ್ವಿ: ಅಂಗನವಾಡಿಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ತಹಸೀಲ್ದಾರ್ ರಾಜು ಪಿರಂಗಿಗೆ ಮನವಿ ಸಲ್ಲಿಸಿತು.

ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ

ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಕೇಂದ್ರಗಳನ್ನು ಮುಚ್ಚುವ ಸ್ಥಿತಿ ಬರಬಹುದು. ಹಾಗಾಗಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಉತ್ತಮ ಆಹಾರ ನೀಡಬೇಕು ಎಂದು ಫೇಡರೇಶನ್ ತಾಲೂಕು ಅಧ್ಯಕ್ಷೆ ಚನ್ನಮ್ಮ ಗುತ್ತೆದಾರ ಒತ್ತಾಯಿಸಿದರು.

3 ರಿಂದ 6 ವರ್ಷ ವರೆಗಿನ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸಗಳನ್ನು ಅಂಗನವಾಡಿಗಳಲ್ಲಿ ನೀಡಬೇಕು ಎನ್ನುವ ನಿಯಮವಿದೆ. ಆದರೂ ಪರ್ಯಾಯವಾಗಿ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಗ್ರಾಮಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ಪ್ರಾರಂಭಿಸುವುದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ನೀಡಬೇಕು ಹಾಗೂ ಸರ್ಕಾರ 6 ನೇ ಗ್ಯಾರಂಟಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಫೆಡರೇಶನ್ ಗೌರವ ಕಾರ್ಯದರ್ಶಿ ಎಂ.ಬಿ.ಸಿದ್ರಾಮಯ್ಯಸ್ವಾಮಿ, ಪ್ರಮುಖರಾದ ಸರಸ್ವತಿ, ನಾಗಮ್ಮ, ವೆಂಕಮ್ಮ, ಪಾರ್ವತಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net