ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

Mdl Anganavadi
ಮುದಗಲ್‌ನ ಮೇಗಳಪೇಟೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶನಿವಾರ ಸಮವಸ್ತ್ರ ವಿತರಿಸಲಾಯಿತು. ಇಲಾಖೆ ಅಧಿಕಾರಿ ಸರಸ್ವತಿ, ಮೇಲ್ವಿಚಾರಕಿ ಗುರುಬಸಮ್ಮ, ಅನಸೂಯಾ, ಕಾರ್ಯಕರ್ತೆ ಬಸಮ್ಮ, ಶಾಂತಾ, ಪದ್ಮಾ, ನಾಗರತ್ನಾ ಇತರರಿದ್ದರು.
Published on

ಮುದಗಲ್: ಪಟ್ಟಣದ ಮೇಗಳಪೇಟೆ ಅಂಗನವಾಡಿ ಕೇಂದ್ರ-3ರಲ್ಲಿ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸರಸ್ವತಿ ಅವರು ಶನಿವಾರ ಸ್ವಂತ ವೆಚ್ಚದಲ್ಲಿ ಸಮವಸ್ತ್ರ ವಿತರಿಸಿದರು.

ಈಚೆಗೆ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮಕ್ಕಳ ಹಾಜರಾತಿ ಕಂಡು ಭರವಸೆ ನೀಡಿದ್ದರು. ಅದರಂತೆ 27 ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಅಧಿಕಾರಿ ಸರಸ್ವತಿ ಅವರು, ಬಾಲ್ಯದಿಂದಲೇ ಮಕ್ಕಳು ಸಮವಸ್ತ್ರಧರಿಸಿ ಶಿಸ್ತು, ಶೈಕ್ಷಣಿಕವಾಗಿ ಪ್ರೇರೇಪಣೆ ದೊರೆಯಲಿ ಎನ್ನುವ ಉದ್ದೇಶದಿಂದ ವಿತರಿಸಲಾಗಿದೆ ಎಂದರು.

ಮುಖಂಡ ಅಯ್ಯಪ್ಪಯ್ಯ, ಅಂಗನವಾಡಿ ಕಾರ್ಯಕರ್ತೆ ಬಸಮ್ಮ, ಶಾಂತಾ, ಪದ್ಮಾ, ನಾಗರತ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net