

ಕೆರೂರ: ಗ್ರಾಮೀಣ ಪ್ರದೇಶದ ಬಡ ಮಕ್ಕಳ ಕಲಿಕೆಗೆ ಅಂಗನವಾಡಿ ಆಸರೆಯಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸಮೀಪದ ನೀರಬೂದಿಹಾಳ ಗ್ರಾಮದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಮಕ್ಕಳ ಜನ್ಮದಿನದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡ ಮಕ್ಕಳಿಗೆ ಶೈಕ್ಷಣಿಕ ಕಾಳಜಿ ತೋರಿ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಶ್ರಮಿಸಬೇಕು ಎಂದರು.
ಪ್ರತಿನಿತ್ಯ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕರೆ ತರುವ ಸಹಾಯಕಿಯರ ಮತ್ತು ಕಾರ್ಯಕರ್ತರ ಕಾರ್ಯ ಮೆಚ್ಚುವಂತದ್ದು, ದಿನಾಲು ಮಕ್ಕಳಿಗೆ ಮೊಟ್ಟೆ, ಹಾಲು ಸೇರಿ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಲು ಹಿಂದೇಟು ಹಾಕಬಾರದೆಂದು ಶಾಸಕರು ತಾಕೀತು ಮಾಡಿದರು.
ಅಲ್ಲದೆ, ಕೇಂದ್ರದಲ್ಲಿನ ಹತ್ತು ಮಕ್ಕಳ ಜನ್ಮದಿನವನ್ನು ಶಾಸಕರ ಸಮ್ಮುಖದಲ್ಲಿ ಆಚರಿಸಲಾಯಿತು.
ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಸಿಪಿಒ ಶಿಲ್ಪಾ ಹಿರೇಮಠ, ತಾಪಂ ಇಒ ಅಶೋಕ ತಿರಕನ್ನವರ, ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹೊಲಗೇರಿ, ಉಪಾಧ್ಯಕ್ಷ ಚಿಂತಾಮನಿ ರಾಠೋಡ, ಪಿಡಿಒ ಟಿ.ಎಂ. ಕುಂದರಗಿ, ಉಪ ತಹಸೀಲ್ದಾರ್ ರಾಜಶೇಖರ ಸಾತಿಹಾಳ, ಗಿರೀಶ ನಾಡಗೌಡ, ಕರಿಯಪ್ಪ ಪೂಜಾರ, ಸುರೇಶ ಪೊತರೆಡ್ಡಿ, ಶೋಭಾ ನಿಂಗರೆಡ್ಡಿ, ಮಂಜು ಪಮ್ಮಾರ ಇತರರಿದ್ದರು.