

ಯಲಬುರ್ಗಾ: ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಭದ್ರ ಬುನಾದಿಯಾಗಿವೆ ಎಂದು ಅಂಗನವಾಡಿ ಮೇಲ್ವಿಚಾರಕಿ ಸವಿತಾ ಗೌಡರ ಹೇಳಿದರು.
ತಾಲೂಕಿನ ಕುದ್ರಿಕೋಟಗಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎರಡನೇ ಅಂಗನವಾಡಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ. ಪಾಲಕರು ಮಕ್ಕಳನ್ನು ತಪ್ಪದೆ ಅಂಗನವಾಡಿಗೆ ಕಳುಹಿಸಿ ಎಂದರು.
ಸಮನ್ವಯ ಸಮಿತಿಯ ನಾಗರತ್ನಾ ಹಳ್ಳಿಗುಡಿ, ಲಕ್ಷ್ಮೀ ಗೋನಾಳ, ನಿರ್ಮಲಾ ಬಳಗೇರಿಮಠ, ಪ್ರಭುರಾಜ ಬಳಗೇರಿಮಠ, ಮುತ್ತಣ್ಣ ಮಾದರ, ದ್ಯಾಮಕ್ಕ ಮಾದರ, ದುರಗಪ್ಪ ಮಾದರ, ಅಂಗನವಾಡಿ ಕಾರ್ಯಕರ್ತೆಯರಾದ ಹನುಮವ್ವ ಗೌಡ್ರ, ಸುಜಾತಾ ಛಲವಾದಿ, ಸಹಾಯಕಿ ರತ್ನಮ್ಮ ಇತರರಿದ್ದರು.