ಮಕ್ಕಳ ಬೆಳವಣೆಗೆಗೆ ಅಂಗನವಾಡಿಗಳು ಪೂರಕ

28Kdr1
Published on

ಕಡೂರು: ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನವಿದ್ದರೂ ಜಾಗದ

ಸಮಸ್ಯೆ ಉಂಟಾಗಿತ್ತು. ಪುರಸಭೆ ಆಸಕ್ತಿಯಿಂದ ನೂತನ ಅಂಗನವಾಡಿ ಕಟ್ಟಡ

ನಿರ್ಮಾಣವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಗಣಪತಿ ಪೆಂಡಾಲ್ ಆವರಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ

ಶಾಲೆ ಮುಂಭಾಗದಲ್ಲಿ ಸೋಮವಾರ 20 ಲಕ್ಷ ರೂ.ವೆಚ್ಚದ ನೂತನ ಅಂಗನವಾಡಿ

ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅಶ್ವಥ್ ನಗರದಲ್ಲಿ

ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಹಲವಾರು ಅಡೆತಡೆಗಳಿದ್ದವು. ಅನುದಾನ

ದೊರೆತರೂ ಜಾಗದ ಸಮಸ್ಯೆಯಿಂದ ಕಟ್ಟಡ ನಿರ್ಮಾಣ ವಿಳಂಬವಾಗಿತ್ತು. ಪುರಸಭೆ

ಜಾಗ ನೀಡಿದ್ದರಿಂದ ಭೂ ಸೇನಾ ನಿಗಮದಿಂದ ಸುಸಜ್ಜಿತ ಕಟ್ಟಡ

ನಿರ್ಮಾಣಗೊಳ್ಳಲಿದೆ. ಈ ಭಾಗದ ಮಕ್ಕಳ ಬೆಳವಣಿಗೆಗೂ ಈ ಅಂಗನವಾಡಿ ಕೇಂದ್ರ

ಹೆಚ್ಚು ಸಹಕಾರಿಯಾಗಲಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಬಹುದಿನಗಳ ಬೇಡಿಕೆಯ

ಅನುಗುಣವಾಗಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ಜಾಗ

ಒದಗಿಸಿಕೊಡಲಾಗಿದೆ. ಶಾಸಕರ ಸಹಕಾರದಿಂದ ಅನುದಾನ ಪಡೆದು ಕಟ್ಟಡ

ನಿರ್ಮಾಣ ಮಾಡಿಕೊಳ್ಳುವ ಮೂಲಕ ನೂತನ ಕೇಂದ್ರದಲ್ಲಿ ಮಕ್ಕಳು ಮತ್ತು ಗರ್ಭಿಣಿ,

ಬಾಣಂತಿಯರಿಗೆ ಅತ್ಯುತ್ತಮ ಸೇವೆ ನೀಡುವಂತಾಗಲಿ ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಶ್ರೀಕಾಂತ್, ಮರುಗುದ್ದಿ

ಮನು, ಇಕ್ಬಾಲ್, ಯಾಸೀನ್, ಸುಧಾ ಉಮೇಶ್, ಕಮಲಾ ವೆಂಕಟೇಶ್, ಜ್ಯೋತಿ

ಆನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net