ಅಂಗನವಾಡಿ ಪರಿಶೀಲಿಸಿದ ನೋಡಲ್ ಅಧಿಕಾರಿ

JYD
Published on

ಜೊಯಿಡಾ: ಆಡಳಿತ ಸುಧಾರಣಾ ಆಯೋಗದ ಜೊಯಿಡಾ ನೋಡಲ್ ಅಧಿಕಾರಿ ಜಯಲಕ್ಷ್ಮಿ ರಾಯಕೋಡ ಅವರು ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಅಂಗನವಾಡಿಯಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯದಲ್ಲಿ ಪ್ರಗತಿ ಸಾಧಿಸಬೇಕು. ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಅಭಿನಯ ಗೀತೆ, ಹಾಡು ಹಾಗೂ ಆಟಿಕೆ ಸಾಮಾನುಗಳೊಂದಿಗೆ ಆಡುವುದನ್ನು ನೋಡಿ ಖುಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೊಯಿಡಾ ಸಿಡಿಪಿಒ ಶಿವಗಂಗಾ , ಮೇಲ್ವಿಚಾರಕಿ ವಿಜಯಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ, ಸುವರ್ಣ ದೇಸಾಯಿ , ಸಹಾಯಕಿಯರಾದ ಪೂರ್ಣಿಮಾ, ಮಾಧುರಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net