ನೆಮ್ಮಲೆಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ

18 gkp .1
ಟಿ.ಶೆಟ್ಟಿಗೇರಿ ಗ್ರಾಮದ ನೆಮ್ಮಲೆ ಕಾಲನಿಯಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
Published on

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಗ್ರಾಮದ ನೆಮ್ಮಲೆ ಕಾಲನಿಯಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಅಂಗನವಾಡಿಯಲ್ಲಿ ಕಲಿಯುವ ಪುಟಾಣಿ ಮಕ್ಕಳು ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಇಲ್ಲಿಂದಲೇ ಪ್ರಾರಂಭಿಸುತ್ತಾರೆ. ಆದ್ದರಿಂದ ಅಂಗನವಾಡಿ ಕೇಂದ್ರಗಳು ಮಕ್ಕಳ ಆರಂಭಿಕ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸುವತಾಗಲು ಸರ್ಕಾರ ಹೆಚ್ಚು ಕಾಳಜಿ ವಹಿಸುತ್ತಿದೆ. ಅಂಗನವಾಡಿಯ ಶಿಕ್ಷಕಿಯರು ಮಕ್ಕಳ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿ ಆಗುವಂತಹ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ತಿತೀರ ಪ್ರಭು, ತಾಲೂಕು ಅಕ್ರಮ ಸಕ್ರಮ ಅಧ್ಯಕ್ಷ ಲಾಲಾ ಅಪ್ಪಣ್ಣ, ಪಕ್ಷದ ಪ್ರಮುಖರಾದ ಚೋಟೆಯಂಡಮಾಡ ವಿಶು, ಆಲೆಮಾಡ ಸೋಮಣ್ಣ, ಪೆಮ್ಮಂಡ ರಾಜ, ಮುಕಟ್ಟೀರ ಸಂದೀಪ್, ಬಾಲಕೃಷ್ಣ, ಬೋಸು, ದಿನೇಶ್, ಮಂಜು, ಕಿರಣ್, ಅನಿಲ್, ಮನು, ಕೃಷ್ಣ, ನಟೇಶ್, ಉದಯ್, ದೀಪು, ಸುರೇಂದ್ರ, ದರ್ಶನ್, ರವಿ, ಸತೀಶ್, ಹಾಗೂ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net