

ಧಾರವಾಡ: ಆರೋಗ್ಯ ಇಲಾಖೆಯ ಇ ಸರ್ವೇಯಿಂದ ಮುಕ್ತಿಗೊಳಿಸಬೇಕು ಹಾಗೂ ಅನ್ಯ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೊರೆ ಹಾಕಬಾರದು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ೆಡರೇಶನ್ (ಎಐಟಿಯುಸಿ) ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕಳಪೆ ಗುಣಮಟ್ಟದ ಹಾಗೂ ಹಾಳಾಗಿರುವ ಮೊಬೈಲ್‌ಗಳನ್ನು ವಾಪಸ್ ಪಡೆದು ಕೂಡಲೇ ಹೊಸ ಮೊಬೈಲ್ ಅಥವಾ ಟ್ಯಾಬ್ ನೀಡಬೇಕು. ಟೆಂಡರ್ ಪರಿಣಾಮ ಕಳಪೆ ಹಾಗೂ ಸಣ್ಣ ಗಾತ್ರದ ಮೊಟ್ಟೆಗಳು ಸರಬರಾಜು ಆಗುತ್ತಿವೆ. ಮೊಟ್ಟೆ ಖರೀದಿಯ ಜವಾಬ್ದಾರಿಯನ್ನು ಬಾಲವಿಕಾಸ ಸಮಿತಿಗೆ ವಹಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ಬಾಡಿಗೆ ಹಣ ಪಾವತಿಸಬೇಕು. ಕಾಂಗ್ರೆಸ್‌ನ 6ನೇ ಗ್ಯಾರಂಟಿಯಾಗಿರುವ ಮಾಸಿಕ ವೇತನ ಹೆಚ್ಚಳ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ನೂರಜಹಾನ್ ಸಮುದ್ರಿ, ವೀರಮ್ಮ ತುರಕಾನಿ, ರತ್ನಾ ಶಿರೂರ, ಎ. ಪೀರಜಾದೆ, ಇತರರಿದ್ದರು.