

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದಲ್ಲಿ ಬಿಸಿಲು ಹೆಚ್ಚಾಗಿರುವ ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಅಂಗನವಾಡಿ ಕಾರ್ಯನಿರ್ವಹಣ ಸಮಯ ಬದಲಾವಣೆಯನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊರಡಿಸಿರುವ ಸುತ್ತೋಲೆಯಂತೆ ಗ್ರಾಮಾಂತರ ಜಿಲ್ಲೆಯ ಅಂಗನವಾಡಿಗಳಿಗೂ ನಿಯಮ ಅಳವಡಿಸಿಕೊಳ್ಳಲಾಗಿದೆ.
ಏ.15ರಿಂದ ಮೇ 26ರವರೆಗೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಈ ಅವಧಿಯಲ್ಲಿ ಬೆಳಗ್ಗಿನ ಉಪಹಾರ ಹೊರತುಪಡಿಸಿ ಉಳಿದ ಇನ್ನೆರಡು ಹೊತ್ತಿನ ಆಹಾರವನ್ನು ಲಾನುಭವಿಗಳ ಮನೆಗೆ ಕಳುಹಿಸಿಕೊಡುವಂತೆ (ಟೇಕ್ ಹೋಂ ರೇಷನ್) ಇಲಾಖೆ ಸುತ್ತೋಲೆ ಹೊರಡಿಸಿದ್ದು, ಗ್ರಾಮಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅಂಗನವಾಡಿ ಕೇಂದ್ರಗಳಿಗೆ ಸೂಚನೆ ರವಾನಿಸಿದ್ದಾರೆ.ಮೊಟ್ಟೆ ಸೇರಿ ಅಂಗನವಾಡಿಗಳಲ್ಲಿ ಕೊಡಮಾಡುವ ಆಹಾರ ಪದಾರ್ಥಗಳನ್ನು ಲಾನುಭವಿಗಳ ಮನೆಗಳಿಗೆ ಕಳುಹಿಸಿಕೊಡುವುದರ ಜತೆಗೆ ಪೌಷ್ಟಿಕ ಆಹಾರ ವಿತರಣೆ ವಿಷಯದಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಜತೆಗೆ ಟೇಕ್ ಹೋಮ್ ರೇಷನ್ ವಿತರಿಸಿದ ಬಗ್ಗೆ ತಪ್ಪದೆ ಪೋಷನ್ ಟ್ರ್ಯಾಕರ್‌ನಲ್ಲಿ ದತ್ತಾಂಶ ನಮೂದಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಅಂಗನವಾಡಿ ಟೈಮಿಂಗ್ ಬದಲು: 15ರಿಂದ ಮೇ 10 ರವರೆಗೆ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 12 ರವರೆಗೆ ಅಂಗನವಾಡಿಗಳು ಕಾರ್ಯನಿರ್ವಹಿಸಲಿವೆ. ಬೇಸಿಗೆ ರಜೆ ಅವಧಿ ಹೊರತುಪಡಿಸಿ ಉಳಿದ ಎಲ್ಲ ಕೆಲಸದ ದಿನಗಳಲ್ಲಿ ಕಡ್ಡಾಯವಾಗಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಅಂಗನವಾಡಿ ಕೇಂದ್ರಗಳಲ್ಲಿ ಹಾಜರಿದ್ದು ಶಾಲಾ ಪೂರ್ವ ಶಿಕ್ಷಣ ಹಾಗೂ ಪೂರಕ ಪೌಷ್ಟಿಕ ಆಹಾರ ಯೋಜನೆಯಡಿ ಬಿಸಿಯೂಟ ಒದಗಿಸುವ ಸೇವೆ ಹೊರತುಪಡಿಸಿ ಉಳಿದೆಲ್ಲ ಅಂಗನವಾಡಿ ಸೇವೆ ನಿರ್ವಹಿಸಬೇಕು ಎಂದು ಇಲಾಖೆ ಸೂಚಿಸಿದೆ.
15 ದಿನ ಬೇಸಿಗೆ ರಜೆ: ಮೇ 11ರಿಂದ 26 ರವರೆಗೆ 15 ದಿನಗಳ ಕಾಲ ಎಂದಿನಂತೆ ಈ ಬಾರಿಯೂ ಅಂಗನವಾಡಿ ಕೇಂದ್ರಗಳಿಗೆ ಬೇಸಿಗೆ ರಜೆ ೋಷಿಸಿದ್ದು, ಈ ಅವಧಿಯಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಅಂಗನವಾಡಿ ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಮೇ 27ರಿಂದ ಎಂದಿನಂತೆ ಅಂಗನವಾಡಿ ಕೇಂದ್ರಗಳು ಕಾರ್ಯಾರಂಭ ಮಾಡಬೇಕು ಎಂದಿನಂತೆ ಬೆಳಗ್ಗೆ 9.30ರಿಂದ ಸಂಜೆ 4 ರವರೆಗೆ ಅಂಗನವಾಡಿ ಲಾನುಭವಿಗಳಿಗೆ ಬಿಸಿಯೂಟ ಒದಗಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ರಾಜ್ಯದೆಲ್ಲೆಡೆ ಬೇಸಿಗೆಯಲ್ಲಿ ಈ ಹಿಂದಿಗಿಂತಲೂ ಹೆಚ್ಚಿನ ತಾಪಮಾನ ಕಂಡುಬರುತ್ತಿರುವುದು, ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒ ಮತ್ತು ಇನ್ನಿತರ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವುದರಿಂದ ಹಾಗೂ ಹಲವು ಅಂಗನವಾಡಿ ಕೇಂದ್ರಗಳನ್ನು ಚುನಾವಣೆ ನಿಮಿತ್ತ ಚುನಾವಣಾ ಮತಗಟ್ಟೆಗಳನ್ನಾಗಿ ಗುರುತಿಸಿರುವುದು ಸೇರಿ ಇನ್ನಿತರ ಕಾರಣಗಳಿಂದ ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸರ್ಕಾರದ ಸುತ್ತೋಲೆಯಂತೆ ಗ್ರಾಮಾಂತರ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವೇಳಾಪಟ್ಟಿ ಪರಿಷ್ಕರಿಸಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 12 ರವರೆಗೆ ಅಂಗನವಾಡಿಗಳು ಕಾರ್ಯನಿರ್ವಹಿಸಲಿವೆ. ಬೇಸಿಗೆ ರಜೆ ಮುಗಿದ ಬಳಿಕ ಅಂಗನವಾಡಿ ಕೇಂದ್ರಗಳು ಪುನಾರಂಭಗೊಳ್ಳಲಿದ್ದು ಎಂದಿನಂತೆ ಬೆಳಗ್ಗೆ 9.30 ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿವೆ. ಈ ಸಂಬಂಧ ಈಗಾಗಲೇ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಮಾಹಿತಿ ತಲುಪಿಸಲಾಗಿದೆ.
ಮುದ್ದಣ್ಣ, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂ.ಗ್ರಾಮಾಂತರ
ಆಡಳಿತಾತ್ಮಕ ಹಾಗೂ ಅಂಗನವಾಡಿ ಲಾನುಭವಿಗಳ ಹಿತದೃಷ್ಟಿಯಿಂದ ಏ.15ರಿಂದ ಮೇ 26ರವರೆಗೆ (ಬೇಸಿಗೆ ರಜೆ ಒಳಗೊಂಡಂತೆ) ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್ಲ ಅಂಗನವಾಡಿ ಲಾನುಭವಿಗಳ ಹಾಜರಾತಿಗೆ ಕೆಲವೊಂದು ಷರತ್ತುಗೊಳಪಟ್ಟು ವಿನಾಯಿತಿ ೋಷಿಸಲಾಗಿದೆ. ಇದೇ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಈ ಆದೇಶ ಅನ್ವಯಿಸಿ ಸೂಚನೆ ನೀಡಲಾಗಿದೆ.
ಅನಿತಾಲಕ್ಷ್ಮಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ