

ಹೊಳಲ್ಕೆರೆ: ತಾಲೂಕಿನ ಬಿದರಕೆರೆ ಗ್ರಾಮದ ಹಳ್ಳಕ್ಕೆ ಸುಸಜ್ಜಿತ ಸೇತುವೆ ನಿರ್ಮಿಸಲು ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಸೇತುವೆ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗ್ರಾಮದ ಮುಂದಿನ ಹಳ್ಳಕ್ಕೆ ಸೇತುವೆ ಇಲ್ಲದೆ ಜನರು ಹಳ್ಳದ ನೀರಿನಲ್ಲೇ ಸಂಚರಿಸುವ ದುಸ್ಥಿತಿ ಇದೆ. ಇದನ್ನರಿತು ನಿರ್ಮಾಣಕ್ಕೆ ಮುಂದಾಗಿದ್ದು, ಎರಡೂವರೆ ಕೋಟಿ ರೂ. ಬಿಡುಗಡೆಯಾಗಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚು ಹಣ ಒದಗಿಸಲಾಗುವುದು ಎಂದರು.
ವಾಣಿವಿಲಾಸ ಸಾಗರದಿಂದ ತಾಲೂಕಿಗೆ ಕುಡಿಯುವ ನೀರು ಪೂರೈಸುವ 370 ಕೋಟಿ ರೂ. ವೆಚ್ಚದ ಯೋಜನೆಗೆ ಮತ್ತೆ ಈಗ 100 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ಬಿದರಕೆರೆಯಲ್ಲಿ ಹೊಸ ಸೇತುವೆಯೊಂದಿಗೆ,2 ಶಾಲಾ ಕೊಠಡಿಗಳಿಗೆ 32 ಲಕ್ಷ ರೂ.,ಗಂಗಸಮುದ್ರದಲ್ಲಿ ಸಿಸಿ ರಸ್ತೆಗೆ 40 ಲಕ್ಷ ರೂ.ಡಾಂಬಾರ್ ರಸ್ತೆಗೆ 1 ಕೋಟಿ ರೂ.,ಉಪ್ಪಾರ ಹಟ್ಟಿಯಲ್ಲಿ ಸಿಸಿ ರಸ್ತೆಗೆ 15 ಲಕ್ಷ ರೂ.,ಗುಂಡಸಮುದ್ರದಲ್ಲಿ ಸಿಸಿ ರಸ್ತೆಗೆ 15 ಲಕ್ಷ, ಶಾಲಾ ಕೊಠಡಿಗೆ 15 ಲಕ್ಷ ರೂ.,ಅಂಗನವಾಡಿ ಕಟ್ಟಡಕ್ಕೆ 10 ಲಕ್ಷ ರೂ.,ಬೊಮ್ಮನಹಳ್ಳಿಯಲ್ಲಿ ಸಿಸಿ ರಸ್ತೆಗೆ 15 ಲಕ್ಷ ರೂ.ಅನುದಾನದ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.
ಗ್ರಾಪಂ ಅಧ್ಯಕ್ಷೆ ಸುಶ್ಮಾ ಸಚಿನ್,ತಾಪಂ ಇಒ ಅಂಜನ್‌ಕುಮಾರ್,ಬಿಇಒ ಶ್ರೀನಿವಾಸ್,ಸಣ್ಣನೀರಾವರಿ ಇಲಾಖೆ ಎಇಇ ವೆಂಕಟರಮಣ, ಗಂಗ ಸಮುದ್ರ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ,ವಿಶಾಲಮ್ಮ,ಭಾರತಮ್ಮ,ಜಿಪಂ ಮಾಜಿ ಸದಸ್ಯ ಮಹೇಶ್ವರಪ್ಪ,ಹರಳಪ್ಪ,ನಾಗಲಿಂಗಪ್ಪ,ಯುವರಾಜ್ ಇತರರು ಇದ್ದರು.
---