ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಗತ್ಯ ಅನುದಾನ ಬಿಡುಗಡೆಯಾಗದೆ, ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿ-ಬಾಣಂತಿಯರಿಗೆ ಎರಡು ತಿಂಗಳಿಂದ ಅಗತ್ಯ ಆಹಾರ ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತರಿಗೂ ಅನುದಾನದ ಕೊರತೆಯಿಂದ ವೇತನ ಸಿಗುತ್ತಿಲ್ಲ. ಕೆಲವು ಭಾಗದಲ್ಲಿ ಮಕ್ಕಳಿಗೆ ಮಧ್ಯಾಹ್ನ ಆಹಾರ ಇಲ್ಲವೆಂದಾಗಬಾರದೆಂದು ಪಾಲಕರಲ್ಲೇ ಆಹಾರವನ್ನು ಭಿಕ್ಷೆ ಬೇಡಿ ಬೇಯಿಸಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಗನವಾಡಿಯಲ್ಲಿ ಮಕ್ಕಳಿಗೆ ದಿನಕ್ಕೆ ೮ ರೂ. ಹಾಗೂ ಗರ್ಭಿಣಿ-ಬಾಣಂತಿಯರಿಗೆ ದಿನಕ್ಕೆ ೨೧ ರೂ. ವಿನಿಯೋಗಿಸಿಕೊಂಡು ಆಹಾರ ನೀಡಲಾಗುತ್ತಿತ್ತು. ಜನವರಿಯ ಬಳಿಕ ಅನುದಾನ ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ದಾಸ್ತಾನು ಇರುವುದನ್ನು ನೀಡಲಾಗುತ್ತಿತ್ತು. -ಬ್ರವರಿಯಲ್ಲಿ ಸಂಗ್ರಹವಿದ್ದ ಆಹಾರಗಳ ಪದಾರ್ಥಗಳು ಮುಗಿದ ಹಿನ್ನೆಲೆಯಲ್ಲಿ ಕೆಲವು ಭಾಗದಲ್ಲಿ ಮಕ್ಕಳ ಪಾಲಕರಲ್ಲಿ ಅಕ್ಕಿಯನ್ನು ಬೇಡಿ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಮಾರ್ಚ್‌ನಲ್ಲಿ ಇದು ಮುಂದುವರಿದ್ದು, ಹೆಚ್ಚಿನ ಅಂಗನವಾಡಿಯಲ್ಲಿ ಆಹಾರವೇ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳಿಗೆ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ನಾಲ್ಕು ದಿನ ಅಕ್ಕಿ, ತೊಗರಿ, ಸಾಂಬಾರು ಹುಡಿ, ಉಪ್ಪು, ಎಣ್ಣೆ, ಸಾಸಿವೆ, ನೆಲಕಡ್ಲೆ ಚಿಕ್ಕಿ, ಮೊಳಕೆ ಹೆಸರುಕಾಳು, ಎಣ್ಣೆ, ಸಾಸಿವೆ ಬಳಸಿ ಊಟ ತಯಾರಿಸಿ ನೀಡಲಾಗುತ್ತಿತ್ತು. ಮಂಗಳವಾರ, ಗುರುವಾರ ಕಡ್ಲೆಕಾಳು, ಎಣ್ಣೆ, ಸಾಸಿವೆ, ಉಪ್ಪು, ಮೆಣಸು, ಅಕ್ಕಿ, ಹುರುಳಿ, ಮೆಣಸು, ಉಪ್ಪು ಬಳಸಿ ಗಂಜಿ ಚಟ್ನಿ ನೀಡುವ ಜತೆಗೆ ಹೆಚ್ಚುವರಿಯಾಗಿ ಮೊಟ್ಟೆ, ಚಿಕ್ಕಿ ನೀಡಲಾಗುತ್ತಿತ್ತು. ಗರ್ಭಿಣಿ, ಬಾಣಂತಿಯರಿಗೆ ಅಕ್ಕಿ, ಗೋಽ, ತೊಗರಿ, ಹುರುಳಿ, ಬೆಲ್ಲ, ಹೆಸರು ಕಾಳು, ಉಪ್ಪು, ಸಾಂಬಾರು ಹುಡಿ, ಕಡ್ಲೆಕಾಳು ಜತೆಗೆ ಮೊಟ್ಟೆ, ಚಿಕ್ಕಿಯನ್ನು ೨೫ ದಿನಗಳಿಗೆ ಬೇಕಾದಷ್ಟು ನೀಡಲಾಗುತ್ತಿತ್ತು.
ಕಾರ್ಯಕರ್ತರಿಗೆ ವೇತನವಿಲ್ಲ
ಅಂಗನವಾಡಿ ಶಿಕ್ಷಕಿಯರಿಗೆ ತಿಂಗಳಿಗೆ ೧೧,೫೦೦ ರೂ. ವೇತನ ಹಾಗೂ ಸಹಾಯಕರಿಗೆ ೬ ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಆದರೆ ಜನವರಿ ಹಾಗೂ -ಬ್ರವರಿಯಿಂದ ಇದರ ಪಾವತಿಯೂ ಸಮರ್ಪಕವಾಗಿ ಆಗುತ್ತಿಲ್ಲ. ಅಂಗನವಾಡಿಗಳ ವಿದ್ಯುತ್ ಬಿಲ್ ಕೂಡ ಕೆಲವು ಸಮಯದಿಂದ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ. ಖಾಸಗಿ ಕಟ್ಟಡದಲ್ಲಿರುವ ಕಚೇರಿಗಳ ಬಾಡಿಗೆ ನೀಡಲೂ ಅನುದಾನ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೀನಾಯ ಸ್ಥಿತಿಗೆ ಸರ್ಕಾರ ಗ್ಯಾರಂಟಿ ಯೋಜನೆಗಳೇ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಽಕಾರಿಗಳು ಸಮರ್ಪಕ ಅನುದಾನದ ಬೇಡಿಕೆ ಸಲ್ಲಿಸದೇ ಇರುವುದೂ ಇದಕ್ಕೆ ಕಾರಣ ಎಂಬ ಮಾತೂ ಕೇಳಿ ಬರುತ್ತಿದೆ.
ಸಮಸ್ಯೆ ಕೇಳುವವರಿಲ್ಲ
ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತರಿಗೆ ೬ನೇ ಗ್ಯಾರಂಟಿ ನೀಡುವುದಾಗಿ ಹೇಳಿಕೊಂಡಿತ್ತು. ಆದರೆ ಅದನ್ನು ಜಾರಿಗೊಳಿಸುವ ಬದಲು ಗ್ರಾಮ ಗ್ರಾಮದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮೀಕ್ಷೆ ಮಾಡುವ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಇದರ ಜತೆಗೆ ಚುನಾವಣಾ ಕೆಲಸ, ಆರೋಗ್ಯ ಇಲಾಖೆಯ ವಿವಿಧ ಸರ್ವೇ ಕಾರ್ಯ, ಜನಗಣತಿ ಸೇರಿ ವಿವಿಧ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಆದರೆ ಅವರಿಗಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನು ಮಾತ್ರ ಯಾರೊಬ್ಬರೂ ಮಾಡುತ್ತಿಲ್ಲ.
ಖಾಲಿ ಹುದ್ದೆಗೆ ನೇಮಕಾತಿ ಇಲ್ಲ
ಜಿಲ್ಲೆಯ ಹಲವು ಅಂಗವಾಡಿಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಉಳಿದುಕೊಂಡಿದ್ದು, ಕಳೆದ ಎರಡು ವರ್ಷಗಳಿಂದ ಹೊಸ ನೇಮಕಾತಿ ಮಾಡುತ್ತಿಲ್ಲ. ಅಂಗನವಾಡಿಗಳಲ್ಲಿ ಶಿಕ್ಷಕಿಯರು ಅಥವಾ ಸಹಾಯಕಿಯರನ್ನು ಹೊರತುಪಡಿಸಿ ಬೇರೆಯವರನ್ನು ನಿಲ್ಲಿಸಿ ಹೋಗಬಾರದು ಎಂಬ ನಿಮಯ ಬೇರೆ ಇದೆ. ಇದರಿಂದ ಹುದ್ದೆ ಖಾಲಿ ಇರುವ ಅಂಗನವಾಡಿ ಶಿಕ್ಷಕಿಯರು ಇಲಾಖೆ ಅಗತ್ಯ ಕೆಲಸಕ್ಕೆ ಹಾಗೂ ಸರ್ಕಾರಿ ಚಟುವಟಿಕೆಯಲ್ಲಿ ಭಾಗವಹಿಸಲು ಕಷ್ಟವಾಗುತ್ತಿದೆ.
ನೌಕರರು ಒಂದು ದಿನದ ರಜೆ ಕೇಳಿದರೆ, ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯಾಗುತ್ತದೆ ಎಂದು ಬೊಬ್ಬಿಡುವ ಇಲಾಖೆಯಲ್ಲಿ ಎರಡು ತಿಂಗಳಿನಿಂದ ಆಹಾರವೇ ಇಲ್ಲದಾಗಿದೆ. ಕರಾವಳಿಯ ಮಕ್ಕಳು ಅನ್ನ ಸಾಂಬಾರು ಹೊರತು ಬೇರೆ ಆಹಾರ ಸೇವಿಸುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ೫೦:೫೦ ಅನುಪಾನದಲ್ಲಿ ಅಂಗನವಾಡಿಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಮಕ್ಕಳಿಗೆ ಆಹಾರ ಹಾಗೂ ನೌಕರರಿಗೆ ವೇತನ ನೀಡದಿರುವುದು ಸರಿಯಲ್ಲ. ವಿವಿಧ ಇಲಾಖೆಯ ಕೆಲಸವನ್ನು ಹೆಚ್ಚುವರಿಯಾಗಿ ನೀಡಿ, ಸವಲತ್ತುಗಳಿಲ್ಲದೇ ಹೋದರೂ ಮಾಡಿಸಲಾಗುತ್ತದೆ. ಇಅಂಗನವಾಡಿ ನೌಕರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಸಂಘದ ಕಡೆಯಿಂದ ಮನವಿ ನೀಡಲಾಗಿದೆ.
| ಬಿ.ಎಂ.ಭಟ್
ಜಿಲ್ಲಾ ಕಾನೂನು ಸಲಹೆಗಾರರು, ಅಂಗನವಾಡಿ ನೌಕರರ ಸಂಘ