

ಮಂಗಳೂರು: ರಾಜ್ಯ ಸರ್ಕಾರದ ಸೂಚನೆಯಂತೆ ಒಂದೂವರೆ ವರ್ಷದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸೋಮವಾರ ಅಂಗನವಾಡಿಗಳು ತೆರೆದುಕೊಂಡಿದ್ದು, ಮಕ್ಕಳ ಕಲರವ ಮತ್ತೆ ಕೇಳಿಸಲು ಆರಂಭವಾಗಿದೆ.
ಆದರೆ ಹಿಂದಿನ ದಿನಗಳಿಗೆ ಹೋಲಿಸಿದರೆ ಮಕ್ಕಳ ಸಂಖ್ಯೆ ಕಡಿಮೆಯಿತ್ತು. ಬಹುತೇಕ ಹೆತ್ತವರು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಮುಂದಾಗಿಲ್ಲ. ಕೆಲವು ಕಡೆಗಳಲ್ಲಿ ಕೇಂದ್ರಕ್ಕೆ ಬಂದ ಪುಟಾಣಿಗಳಿಗೆ ಆರತಿ ಬೆಳಗಿ, ತಿಲಕ ಇಟ್ಟು ಸ್ವಾಗತಿ, ಸಿಹಿತಿಂಡಿ ವಿತರಿಸಿ ಖುಷಿ ಪಡಿಸಲಾಯಿತು. ಮೊದಲ ಹೆತ್ತವರೂ ಸ್ವಲ್ಪ ಹೊತ್ತು ಮಕ್ಕಳ ಜತೆ ಇದ್ದು, ಬಳಿಕ ಮನೆಗೆ ಕರೆದುಕೊಂಡು ಹೋದರು. ಸದ್ಯ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ವಿತರಣೆಗೆ ಅವಕಾಶ ನೀಡದಿರುವುದರಿಂದ ಮನೆಗೆ ಪೂರೈಸಲಾಗುತ್ತಿದೆ.
ಜಿಲ್ಲೆಯಲ್ಲಿ 2108 ಅಂಗನವಾಡಿ ಕೇಂದ್ರಗಳಿದ್ದು, 1.80 ಲಕ್ಷ ಲಾನುಭವಿಗಳು, 4200 ಮಂದಿ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರಿದ್ದಾರೆ.