ಹಳ್ಳಿಕೆರೆ ಕೃಷಿ ಸಂಘಕ್ಕೆ ಅಂಗಡಿ ಸುರೇಶ್ ಅಧ್ಯಕ್ಷ

12M.D.R.1
Published on

ಮದ್ದೂರು: ತಾಲೂಕಿನ ಹಳ್ಳಿಕೆರೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಂಗಡಿ ಸುರೇಶ್ ಅವಿರೋಧವಾಗಿ ಆಯ್ಕೆಯಾದರು.

ನಿಗದಿಯಾಗಿದ್ದಂತೆ ಗುರುವಾರ ನಡೆದ ಚುನಾವಣೆಯಲ್ಲಿ ಸುರೇಶ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸುಧಾಕರ್ ಅವರು ಅಂಗಡಿ ಸುರೇಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷ ಅಂಗಡಿ ಸುರೇಶ್ ಮಾತನಾಡಿ, ಸಂಘದ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳ ಸದಸ್ಯರು ಶ್ರೇಯೋಭಿವೃದ್ಧಿಗೆ ಎಲ್ಲ ನಿರ್ದೇಶಕರು ಸಹಕಾರ ಪಡೆದು ಶ್ರಮಿಸುವುದಾಗಿ ತಿಳಿಸಿದರು.ಕೃಷಿಗೆ ಸಂಬಂಧಿಸಿದ ಸಾಲ, ರೈತರಿಗೆ ಸಕಾಲದಲ್ಲಿ ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ದೊರಕುವಂತೆ ಗಮನಹರಿಸುವುದಾಗಿ ತಿಳಿಸಿದರು.ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ನಿರ್ದೇಶಕರಾದ ರವಿ, ಮಂಚೇಗೌಡ, ಈಶ್ವರಾಚಾರಿ, ಶಿವಲಿಂಗಯ್ಯ, ಪುಟ್ಟತಾಯಮ್ಮ, ಲತಾ ಸೇರಿದಂತೆ ಹಳ್ಳಿಕೆರೆ, ಕಬ್ಬಾರೆ ಬುಳ್ಳನದೊಡ್ಡಿ, ಎಲೆದೊಡ್ಡಿ, ಭೀಮನಕೆರೆ ಹೊಸದೊಡ್ಡಿ ಗ್ರಾಮಗಳ ಮುಖಂಡರುಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net