ಸಂಭ್ರಮದಿಂದ ನಡೆದ ಅಂಗಡಗೇರಿ ಶ್ರೀ ಸಂಗಮೇಶ್ವರ ಜಾತ್ರೋತ್ಸವ

GLS-28-2A
ಗೊಳಸಂಗಿ ಸಮೀಪದ ಅಂಗಡಗೇರಿ ಗ್ರಾಮದಲ್ಲಿ ಭಾನುವಾರ ಸಂಗಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ವೀರಭದ್ರೇಶ್ವರ ದೇವರ ವೀರಗಾಸೆ ಪ್ರದರ್ಶನ ಜನಮನ ಸೂರೆಗೊಂಡಿತು. ಜಿಎಲ್‌ಎಸ್ 28-2ಬಿ: ಗೊಳಸಂಗಿ ಸಮೀಪದ ಅಂಗಡಗೇರಿಯ ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಕಲಶದ ಮೆರವಣಿಗೆ ಭಾನುವಾರ ನಡೆಯಿತು.
Published on

ಗೊಳಸಂಗಿ (ವಿಜಯಪುರ) : ಸಮೀಪದ ಅಂಗಡಗೇರಿ ಗ್ರಾಮದಲ್ಲಿ ಭಾನುವಾರ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ರುದ್ರಸ್ವಾಮಿ ಹಿರೇಮಠ, ಮುತ್ತಯ್ಯಸ್ವಾಮಿ ಹಿರೇಮಠ ನೇತೃತ್ವದಲ್ಲಿ ಸಂಗಮೇಶ್ವರ ಭವ್ಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಶದ ಮೆರವಣಿಗೆ. ವೀರಗಾಸೆ ಸೇರಿ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು. ಬಳಿಕ ಅಗ್ನಿಪ್ರವೇಶ, ಅನ್ನ ಸಂತರ್ಪಣೆ ನಡೆಯಿತು.

ಗ್ರಾಮದ ಪ್ರಮುಖರಾದ ರಾಜಕುಮಾರ ದೇಸಾಯಿ, ಪ್ರಮೋದ ಕೊಳಗೇರಿ, ಕಾಶೀರಾಯ ದೇಸಾಯಿ, ರಾಮನಗೌಡ ಪಾಟೀಲ, ನಾಗಪ್ಪ ಕೊಳಗೇರಿ, ಸಿದ್ದನಗೌಡ ಪಾಟೀಲ, ಶಾಂತಗೌಡ ಬಿರಾದಾರ, ರಾಜಕುಮಾರ ಕೊಳಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net