

ಆನೇಕಲ್: ಪಟ್ಟಣದ ಸಂತೆ ಬೀದಿಯಲ್ಲಿನ ಓಂ ಆದಿಪರಾಶಕ್ತಿ ದೇವಾಲಯದಲ್ಲಿ 17ನೇ ಆಡಿಪುರಂ ಗಂಜಿಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಹಿಳೆಯರು ಬೆಂಕಿ ತುಂಬಿದ ಮಡಕೆ ಹೊತ್ತು ದೇಗುಲದ ಪ್ರದಕ್ಷಿಣೆ ಮಾಡಿ ಪೂಜೆ ಸಲ್ಲಿಸಿದರು. ಈ ನಿಮಿತ್ತ ಕಲಶಾಭಿಷೇಕ, ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಅರ್ಚಕ ಶಕ್ತಿ ವಿ.ವರದರಾಜು, ಪುರಸಭೆ ಮಾಜಿ ಅಧ್ಯಕ್ಷ ಎನ್.ಎಸ್.ಪದ್ಮನಾಭ, ಸದಸ್ಯ ರಾಜೇಂದ್ರ ಪ್ರಸಾದ್ ಇದ್ದರು.