ಜಾನುವಾರುಗಳಿಗೆ ಹೊಸರೋಗ!: ಆನೇಕಲ್ ಗಡಿಭಾಗದಲ್ಲಿ ಹಸುಗಳು ಸಾವು ಕಿವಿಯಲ್ಲಿ ಕಾಣಿಸುವ ಸೋಂಕು

3
ಸೋಂಕಿತ ಹಸುವಿಗೆ ಚಿಕಿತ್ಸೆ ನೀಡುತ್ತಿರುವ ಪಶು ವೈದ್ಯರು.
Published on

ಆನೇಕಲ್: ಜಾನುವಾರುಗಳಿಗೆ ತಗುಲಿರುವ ಓಟೈಟೀಸ್ ಎಂಬ ಹೊಸ ಕಾಯಿಲೆಯಿಂದ ಆನೇಕಲ್ ಭಾಗದಲ್ಲಿ ಹಸುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ತಮಿಳುನಾಡಿನಲ್ಲಿ ಇತ್ತೀಚಿಗೆ ಕಾಣಿಸಿಕೊಂಡ ಈ ಕಾಯಿಲೆ ಗಡಿಭಾಗದಲ್ಲೂ ಹರಡಿದ್ದು, ಕಳೆದೆರಡು ದಿನದಲ್ಲಿ 15 ಹಸುಗಳು ಮೃತಪಟ್ಟಿವೆ. ಹಸುಗಳ ಕಿವಿಯಲ್ಲಿ ಸೋಂಕು ಕಾಣಿಸಿಕೊಂಡು ರಕ್ತ ಸ್ರಾವವಾಗಿ, ಮಿದುಳಿಗೆ ಕಾಯಿಲೆ ಹರಡುತ್ತದೆ, ಬಳಿಕ ಸಾವಿಗೂ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಯಿಲೆ ಕಾಣಿಸಿಕೊಂಡಾಗ ಹಸುಗಳನ್ನು ಒಂದಕ್ಕೊಂದು ಹತ್ತಿರ ಕಟ್ಟಬಾರದು. ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.


ವಿಜ್ಞಾನಿಗಳ ಭೇಟಿ: ತಾಲೂಕಿಗೆ ಶುಕ್ರವಾರ ಹೆಬ್ಬಾಳದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಓಟೈಟೀಸ್ ಎಂಬ ಮಾರಕ ಕಾಯಿಲೆ ಇದಾಗಿದ್ದು ಂಗಸ್, ಸ್ಟೆಪಿಲೋ ಕೋಕಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡಿರುವ ಸಾಧ್ಯತೆ ಇದೆ, ಮೈಕ್ರೋ ಪೈಲೇರಿಯಾ ಎಂಬ ಕ್ರಿಮಿಯಿಂದಲೂ ಈ ರೋಗ ಹರಡುತ್ತಿದೆ. ತಮಿಳುನಾಡಿನ ಥಳಿ, ಡೆಂಕಣಿಕೋಟೆ ಭಾಗದಲ್ಲಿ ಸೋಂಕು ಹೆಚ್ಚಾಗಿತ್ತು, ಇತ್ತೀಚಿಗೆ ತಾಲೂಕಿನ ಗಡಿಭಾಗದಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ.
| ಡಾ.ಪ್ರಕಾಶ್ ನಿವೃತ್ತ ಪಶುವೈದ್ಯ


15 ವರ್ಷದಿಂದ ಇಂತಹ ರೋಗವನ್ನು ಕಂಡಿರಲಿಲ್ಲ, ಕಿವಿಯಲ್ಲಿ ಹಸುವಿಗೆ ನೋವು ಕಾಣಿಸಿಕೊಂಡ ನಂತರ ತಲೆ ಹಾಗೂ ಬೆನ್ನು ಬಾಯಲ್ಲಿ ಸ್ಪರ್ಶವೇ ಇಲ್ಲದಂತಾಗಿ ಒದ್ದಾಡಿ ಮೃತಪಟ್ಟಿದೆ. ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಮೃತಪಡುತ್ತಿರಲಿಲ್ಲ.
| ರಾಮಚಂದ್ರಪ್ಪ ಸೋಲೂರು ಹಸು ಕಳೆದುಕೊಂಡವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net