ಶಾಸನ ಅರಿಯಲು ಚೋಳರ ಕನ್ನಡ ಶಾಸನ ಓದಿ

essay relese
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಶಾಸನ ಭಾಷೆಯನ್ನು ಜನ ಸಾಮಾನ್ಯರು ಅರಿಯುವ ನಿಟ್ಟಿನಲ್ಲಿ ಕನ್ನಡ ಭಾಷೆಯಲ್ಲಿ ರಚಿಸುವ ಮೂಲಕ ಇತಿಹಾಸ ತಿಳಿದುಕೊಳ್ಳಲು ಅನುಕೂಲವಾಗುವಂತೆ ತಾ.ನಂ.ಕುಮಾರಸ್ವಾಮಿ ಪುಸ್ತಕ ರಚಿಸಿದ್ದಾರೆ ಎಂದು ಶಾಸನ ತಜ್ಞ ಆರ್.ಶೇಷಾದ್ರಿ ಹೇಳಿದರು.
ಸಾಹಿತಿ ತಾ.ನಂ.ಕುಮಾರಸ್ವಾಮಿ ರಚಿಸಿರುವ ಕರ್ನಾಟಕದಲ್ಲಿ ಚೋಳರ ಕನ್ನಡ ಶಾಸನಗಳು ಎಂಬ ಮಹಾ ಪ್ರಬಂಧವನ್ನು ಪಟ್ಟಣದ ವಿಧಾತ್ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ, ಮಾತನಾಡಿದರು.
ಶಾಸನ ತಜ್ಞ ಆರ್.ಶೇಷಾದ್ರಿ ಮಾತನಾಡಿ, 10ನೇ ಶತಮಾನದ ಅಂತ್ಯ ಮತ್ತು 12ನೇ ಶತನಮಾನದ ಆರಂಭದವರೆಗೆ ಚೋಳರು ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಳ್ವಿಕೆ ನಡೆಸಿದ್ದರು. ಈ ಭಾಗದಲ್ಲಿ 74 ಕನ್ನಡ ಶಾಸನಗಳು, 170 ತಮಿಳು ಶಾಸನ ಸ್ಥಾಪಿಸಿದ್ದಾರೆ. ಈ ಶಾಸ್ತ್ರ ಭಾಷೆಯನ್ನು ತಾ.ನಂ.ಕುಮಾರಸ್ವಾಮಿ ಅವರ ಪುಸ್ತಕ ಓದಿದರೆ ತಿಳಿಯಬಹುದು ಎಂದರು.
ಸಾಹಿತಿ ತಾ.ನಂ.ಕುಮಾರಸ್ವಾಮಿ ಮಾತನಾಡಿ, ನಮ್ಮ ನಾಡು-ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜತೆಗೆ ಸಮಾಜಕ್ಕೆ ನಮ್ಮದೆ ಆದ ಕೊಡುಗೆ ನೀಡಬೇಕು ಎಂದರು. ಶಾಸನ ತಜ್ಞ ಪಿ.ವಿ.ಕೃಷ್ಣಮೂರ್ತಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net