

ಲಿಂಗಸುಗೂರು: ಕೇಂದ್ರ-ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಡಾ.ರವೀಂದ್ರ ಅಥರ್ಗಾ ಹೇಳಿದರು.
ತಾಲೂಕಿನ ಆನೆಹೊಸೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆಯುಷ್ಮಾನ್ ಭವ ಆರೋಗ್ಯ ಮೇಳದಲ್ಲಿ ಶುಕ್ರವಾರ ಮಾತನಾಡಿದರು. ಮೂರು ತಿಂಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಜನರಿಗೆ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ, ಸ್ವಚ್ಛತಾ ಅಭಿಯಾನ, ತಾಯಿ-ಮಕ್ಕಳ ಪೌಷ್ಠಿಕಾಂಶ ಆಹಾರ ಸೇವನೆ ಮಾಹಿತಿ ಒದಗಿಸಲಾಗುವುದು. ಪ್ರತಿ ತಿಂಗಳ ಮೊದಲ ಮಂಗಳವಾರ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆಯನ್ನು ನುರಿತ ತಜ್ಞರು ವೈದ್ಯರು ಮಾಡಲಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಅಮೀನಾಬಿ, ಡಾ.ತಲ್ಲಳ್ಳಿ, ಆಪ್ತ ಸಮಾಲೋಚಕ ಮುರುಗೇಶ್, ಬಿಲ್ ಕಲೆಕ್ಟರ್ ಶಿವಕುಮಾರ ಇನ್ನಿತರರಿದ್ದರು.