ಆನೆಗುಂದಿ ಶ್ರೀ 21ನೇ ಚಾತುರ್ವಾಸ್ಯ

anegundi
ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪೀಠಾಧಿಪತಿ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ವಿಶ್ವಾವಸು ಸಂವತ್ಸರದ 21ನೇ ವರ್ಷದ ಚಾತುರ್ವಾಸ್ಯ ವ್ರತಾಚರಣೆ ಜು. 10ರಿಂದ ಸೆ.7ರ ವರೆಗೆ ಪಡುಕುತ್ಯಾರಿನ ಮೂಲಮಠದಲ್ಲಿ ನಡೆಯಲಿದೆ ಎಂದು ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ವಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ತಿಳಿಸಿದರು.

ಕಾಪುವಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಹಿತಿ ನೀಡಿದರು. 10ರಂದು ಚಾತುರ್ವಾಸ್ಯ ಆರಂಭಗೊಳ್ಳಲಿದ್ದು ಜು. 22ರಂದು ಜಗದ್ಗುರುಗಳ ಜನ್ಮವರ್ಧಂತಿ, ಸೆ.7ರಂದು ಚಾರ್ತುವಾಸ್ಯ ಸವಾರೋಪ ಸವಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ವಾತೃವಂದನೆ, ಯುವಗೋಷ್ಠಿ ಮತ್ತು ವಿಚಾರ ಸಂಕಿರಣ, ರಾಶಿ ಪೂಜೆ, ವಿಶ್ವಕರ್ಮ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ವಾತನಾಡಿ, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ದುರ್ಗಾ ನಮಸ್ಕಾರ ಪೂಜೆ ಸಂಕಲ್ಪ, ಭಜನೆ, ಗುರುಪಾದುಕಾ ಪೂಜೆ, ಅನುಗ್ರಹ ಮಂತ್ರಾಕ್ಷತೆ, ಆಶೀರ್ವಚನ, ಭೋಜನ ಪ್ರಸಾದ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ, ಗುರುಗಳ ಸಂದರ್ಶನ, ಪಾರಾಯಣ, ಶ್ರೀಕರಾರ್ಚಿತ ಪೂಜೆ ನಡೆಯಲಿದೆ ಎಂದರು.

22ರಂದು ಗುರುಗಳ ಜನ್ಮವರ್ಧಂತಿಯಂದು ಜಗದ್ಗುರುಗಳ ತುಲಾಭಾರ ಸೇವೆ ನಡೆಯಲಿದ್ದು ಭಕ್ತರಿಗೆ ಭಾಗವಹಿಸಲು ಅವಕಾಶವಿದೆ. ಸವಾಜದ ಯುವ ಸಾಧಕರಿಗೆ ಗೌರವಾರ್ಪಣೆ, ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಪಿಎಚ್‌ಡಿ ಪದವಿ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದರು.

ಯುವ ಜನರಿಗಾಗಿ ಸವಾಜದ ಪಂಚಶಿಲ್ಪಗಳ ಪ್ರಾಮುಖ್ಯತೆ, ಯಾಂತ್ರೀಕರಣ ನಾವಿನ್ಯತೆ, ಸಾಧಕರ ಬಗ್ಗೆ ಜಾಗೃತಿ ಮೂಡಿಸುವುದು, ಸವಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯತೆ ಬಗ್ಗೆ ಅರಿವು ಮೂಡಿಸುವ ಕುರಿತಾದ ವಿಚಾರಗೋಷ್ಠಿ ಆಯೋಜನೆ, ಸರಸ್ವತೀ ವಾತೃಮಂಡಳಿ, ಗುರು ಸೇವಾ ಪರಿಷತ್‌ಗಳ ಸವಾವೇಶಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ, ಗುರುಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ವಾತೃಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ, ಪ್ರಮುಖರಾದ ಜಿ.ಟಿ.ಆಚಾರ್ಯ ಮುಂಬೈ, ರತ್ನಾಕರ ಆಚಾರ್ಯ ಉದ್ಯಾವರ, ಜಯಕರ ಆಚಾರ್ಯ ಕರಂಬಳ್ಳಿ, ದೀಪಾ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.

ಚಾತುರ್ವಾಸ್ಯದ ಅವಧಿಯಲ್ಲಿ ಸವಾಜದ ಪ್ರತಿ ಮನೆಯವರಿಂದಲೂ ಗುರುಪಾದುಕಾ ಪೂಜೆ ನಡೆಸುವಂತೆ ಸಂಕಲ್ಪಿಸಲಾಗಿದ್ದು, ಸುವಾರು 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪಾದಪೂಜೆ ಸೇವೆ ನಿರೀಕ್ಷಿಸಲಾಗುತ್ತಿದೆ. ಭಾನುವಾರ, ಗುರುವಾರಗಳಂದು ಭಕ್ತರ ಅನುಕೂಲಕ್ಕಾಗಿ ನಿರಂತರ ಗುರುಪಾದುಕಾ ಪೂಜೆಯ ವ್ಯವಸ್ಥೆ ವಾಡಲಾಗಿದೆ. ವಿ.ಶ್ರೀಧರ ಆಚಾರ್ಯ ವಡೇರಹೋಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net