ಹಾರಗದ್ದೆಯಲ್ಲಿ ಅಂಬಾರಿ ಉತ್ಸವ

elephant
ಆನೇಕಲ್ ತಾಲೂಕು ಹಾರಗದ್ದೆಯ ಆವಲಗಂಗಮ್ಮದೇವಿಯ ಆನೆ ಅಂಬಾರಿ ಉತ್ಸವ ವೈಭವದಿಂದ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ತಾಲೂಕಿನ ಹಾರಗದ್ದೆಯ ಆವಲಗಂಗಮ್ಮ ದೇವಾಲಯದ ವಾರ್ಷಿಕೋತ್ಸವ ಮತ್ತು ದೇವಿಯ ಆನೆ ಅಂಬಾರಿ ಉತ್ಸವ ವೈಭವದಿಂದ ನಡೆಯಿತು.
ಸುತ್ತಮುತ್ತಲಿನ ಗ್ರಾಮಗಳ ಜನ ವೈಭವದ ಉತ್ಸವಕ್ಕೆ ಸಾಕ್ಷಿಯಾದರು. ವಿವಿಧ ಜಾನಪದ ಕಲಾತಂಡಗಳು ಉತ್ಸವಕ್ಕೆ ಮೆರುಗು ನೀಡಿದವು.
ವಾರ್ಷಿಕೋತ್ಸವದ ಅಂಗವಾಗಿ ಮೃತ್ಯಂಜಯ ಹೋಮ, ದುರ್ಗಾ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಪೂರ್ಣಕುಂಭಗಳ ಮೆರವಣಿಗೆ ನಡೆಸಿ ಆವಲಗಂಗಮ್ಮ ದೇವಿಯ ಆನೆ ಅಂಬಾರಿ ಉತ್ಸವವು ಗ್ರಾಮದಲ್ಲಿ ವೈಭವದಿಂದ ನಡೆಯಿತು.
ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾರಗದ್ದೆ ಗ್ರಾಮದ ರಾಜರಾಜೇಶ್ವರಿ ನಗರ್ತ ಮಹಿಳಾ ಸಂಘದ ವತಿಯಿಂದ ಲಲಿತಾ ಸಹಸ್ರನಾಮ ಪಾರಯಣ ನಡೆಸಲಾಯಿತು.
ಆವಲಗಂಗಮ್ಮ ದೇವಾಲಯ ಟ್ರಸ್ಟ್‌ನ ಟ್ರಸ್ಟಿ ಶಾಂತರಾಮ್ ಮಾತನಾಡಿ, ಆವಲಗಂಗಮ್ಮ ದೇವಿಯು ಹಲವಾರು ಭಕ್ತರ ಆರಾಧ್ಯದೈವವಾಗಿದೆ. ಪುರಾತನ ಪರಂಪರೆಯಿದ್ದ ದೇವಾಲಯವನ್ನು ಕಳೆದ ವರ್ಷ ಜೀರ್ಣೋದ್ಧಾರ ಮಾಡಲಾಗಿತ್ತು. ಧಾರ್ಮಿಕ ಕಾರ್ಯಗಳ ಆಚರಣೆಯಿಂದ ಗ್ರಾಮಕ್ಕೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.
ವೀರಗಾಸೆ, ತಮಟೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net